Tuesday, June 6, 2023

Latest Posts

ಖ್ಯಾತ ಗಾಯಕ ಸೋನು ನಿಗಮ್‌ ಕುಟುಂಬಕ್ಕೆ ಕೋವಿಡ್‌ ಸೋಂಕು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಖ್ಯಾತ ಗಾಯಕ ಸೋನು ನಿಗಮ್‌, ಪತ್ನಿ ಮಧುರಿಯಾ, ಪುತ್ರನಿಗೆ ಕೊರೋನಾ ಸೋಂಕು ತಗುಲಿದೆ.

ಈ ಬಗ್ಗೆ ಇನ್‌ ಸ್ಟಾಗ್ರಾಂ ನಲ್ಲಿ ಹೇಳಿಕೊಂಡಿರುವ ಅವರು, ನನಗೆ ಕೊರೋನಾ ಸೋಂಕು ತಗುಲಿದೆ. ನಾನು ಪ್ರಸ್ತುತ ದುಬೈ ನಲ್ಲಿದ್ದೇನೆ. ನಾನು ಭುವನೇಶ್ವರಕ್ಕೆ ಕಾರ್ಯಕ್ರಮಕ್ಕೆ ಬರಬೇಕಿತ್ತು ಆದರೆ, ಕೋವಿಡ್‌ ಗೆ ತುತ್ತಾಗಿರುವ ಕಾರಣ ಬರಲು ಸಾಧ್ಯವಿಲ್ಲ. ಜನರೆಲ್ಲರೂ ಈ ವೈರಸ್‌ನ ಜೊತೆಯಲ್ಲಿಯೇ ಬದುಕುವುದು ಅನಿವಾರ್ಯ ಅನ್ನುವುದು ನನ್ನ ಅನಿಸಿಕೆ ಎಂದು ತಿಳಿಸಿದ್ದಾರೆ.

ಜತೆಗೆ ತಮ್ಮ ಆರೋಗ್ಯದ ಬಗ್ಗೆಯೂ ತಿಳಿಸಿದ ಸೋನು ನಿಗಮ್, ನನ್ನ ಧ್ವನಿ ಚೆನ್ನಾಗಿದೆ. ನನ್ನಿಂದ ತೊಂದರೆಯಾದವರ ಬಗ್ಗೆ ನನಗೆ ಬೇಸರವಿದೆ. ಕೋವಿಡ್ ಬಹಳ ವೇಗವಾಗಿ ಹರಡುತ್ತಿದೆ. ಕೆಲಸವು ಈಗಷ್ಟೇ ಪ್ರಾರಂಭವಾಗಿರುವುದರಿಂದ  ಬಗ್ಗೆ ನಾನು ವಿಷಾದಿಸುತ್ತೇನೆ.  ಚಲನಚಿತ್ರ ನಿರ್ಮಾಪಕರು, ಸಿನಿಮಾಗಳಿಗಾಗಿ ಚಿತ್ರಮಂದಿರಗಳಲ್ಲಿ ಕೆಲಸ ಮಾಡುವವರ ಪರಿಸ್ಥಿಯ ಕುರಿತು ಕಳವಳವಿದೆ. ಆದರೆ ಆಶಾದಾಯಕವಾಗಿರಿ, ಎಲ್ಲವೂ ಚೆನ್ನಾಗಿರುತ್ತದೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!