ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಯಕ ಸೋನು ನಿಗಮ್ ತಂದೆ ಆಗಮ್ ಕುಮಾರ್ ನಿಗಮ್ ಮನೆಯಲ್ಲಿ ಬರೋಬ್ಬರಿ 72 ಲಕ್ಷ ರೂಪಾಯಿ ಕಳ್ಳತನವಾಗಿದೆ.
ತಮ್ಮ ಕಾರ್ ಡ್ರೈವರ್ ಮೇಲೆ ಅನುಮಾನ ಮೂಡಿದ್ದು, ಆತನ ವಿರುದ್ಧ ದೂರು ದಾಖಲಿಸಲಾಗಿದೆ. 72 ಗಂಟೆಯಲ್ಲಿ ಎರಡು ಬಾರಿ ಕಳ್ಳತನ ಮಾಡಿದ್ದು, ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿ ಡ್ರೈವರ್ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ರೆಹಾನ್ ಎಂಬ ಚಾಲಕನನ್ನು ಸೋನು ತಂದೆ ಡ್ರೈವರ್ ಆಗಿ ನೇಮಿಸಿಕೊಂಡಿದ್ದರು. ಆತ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ ಎಂದು ಎಂಟು ತಿಂಗಳ ಬಳಿಕ ಆತನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು.
ಡಿಜಿಟಲ್ ಲಾಕರ್‌ನ ಲಾಕ್ ನಂಬರ್ ತಿಳಿದುಕೊಂಡಿದ್ದ ಚಾಲಕ ಒಟ್ಟಾರೆ ಲಾಕರ್‌ನಿಂದ 72 ಲಕ್ಷ ರೂಪಾಯಿ ಕದ್ದಿದ್ದಾನೆ ಎಂದು ಸೋನು ಸಹೋದರಿ ನಿಕಿತಾ ದೂರು ನೀಡಿದ್ದಾರೆ.