September 27, 2026
Sunday, September 27, 2026
spot_img

ಇಂದಿನಿಂದ ಎಸ್‌ಐಆರ್‌ ಆರಂಭ, ಮತದಾರರೇ, ಈ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತದ ಚುನಾವಣಾ ಆಯೋಗ ರಾಜ್ಯದಲ್ಲಿ ಇಂದಿನಿಂದ ಒಂದು ತಿಂಗಳ ಕಾಲ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಮಾಡಲಿದೆ.

ಈಗಾಗಲೇ ಮ್ಯಾಪಿಂಗ್‌ ಕೆಲಸ ಮುಕ್ತಾಯವಾಗಿದೆ. ಇಂದಿನಿಂದ ಚುನಾವಣಾಧಿಕಾರಿಗಳು, ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ಕೇಳುವ ಕೆಲ ದಾಖಲೆಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳಿ.

ಯಾವ ದಾಖಲೆ?
ಕುಟುಂಬದ ಗುರುತಿನ ಚೀಟಿ
ವೋಟರ್‌ ಐಡಿ
ಆಧಾರ್‌ ಕಾರ್ಡ್‌
ವಿಳಾಸ ದೃಢೀಕರಣ ಪತ್ರ
ಪಾಸ್‌ಪೋರ್ಟ್‌ ಸೈಝ್‌ ಫೋಟೊ

ಬಿಎಲ್‌ಒಗಳು ನಿಮಗೆ ಎಸ್‌ಐಆರ್‌ ಅರ್ಜಿ ನೀಡುತ್ತಾರೆ. ಅಲ್ಲಿ ಮಾಹಿತಿ ನೀಡಿ ಕಡೆಗೆ ಸಹಿ ಮಾಡಬೇಕು. ಎಸ್‌ಐಆರ್‌ನಲ್ಲಿ ಭಾಗಿಯಾಗಿ ಮಾಹಿತಿ ನೀಡಿದರೆ ಮಾತ್ರ ಮತದಾನದ ಹಕ್ಕು, ಇಲ್ಲದೇ ಹೋದರೆ ಮತದಾನದಿಂದ ವಂಚಿತರಾಗುವ ಸಾಧ್ಯತೆ ಇದೆ. ಅಕ್ಟೋಬರ್ 7, 2026ಕ್ಕೆ 18 ತುಂಬುವ ಯುವ ಮತದಾರರು ಅರ್ಜಿ ಹಾಕಬಹುದಾಗಿದೆ. ರಾಜ್ಯ ಚುನಾವಣಾ ಆಯೋಗ, ಜಿಬಿಎ ಹಾಗೂ ಜಿಲ್ಲಾಡಳಿತಗಳು ಸಕಲ ಸಿದ್ಧತೆ ಮಾಡಿಕೊಂಡಿವೆ. ನಕಲಿ ಹಾಗೂ ಅನರ್ಹ ಮತದಾರರನ್ನು ಪಟ್ಟಿಯಿಂದ ಡಿಲೀಟ್‌ ಮಾಡಲು ಎಸ್‌ಐಆರ್‌ ನಡೆಯುತ್ತಿದೆ.

Must Read