ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆಯಷ್ಟೇ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಮನಗರದ ಚೌಲ್ಟ್ರಿಗಳಲ್ಲಿ ಜನರನ್ನು ಕೂರಿಸಿ ಎಸ್‌ಐಆರ್ ಕೆಲಸ ಮಾಡ್ತಿದ್ದಾರೆ ಎಂದು ಆರೋಪಿಸಿದ್ದರು. ಇದೀಗ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಬೆಂಗಳೂರಿನ ಜಯನಗರದಲ್ಲಿ ಮಸೀದಿ ಒಳಗಡೆ ಎಸ್‌ಐಆರ್ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಆಗಸ್ಟ್ ತಿಂಗಳಿನಲ್ಲಿ ಮುಂಗಾರು ಅಧಿವೇಶನ ಮಾಡುತ್ತಾರಂತೆ. ಆದರೆ ಅಧಿವೇಶನ ಮುಂದೂಡಲು ಎಸ್ಐಆರ್ ಕಾರಣ ಅಲ್ಲ. ರೇಟ್ ಫಿಕ್ಸ್ ಆಗದೆ ಸಂಪುಟ ವಿಸ್ತರಣೆ ಡೇಟ್ ಫಿಕ್ಸ್ ಆಗುತ್ತಿಲ್ಲ. ಶಾಸಕರು ಏನು ಮನೆ ಮನೆಗೆ ಹೋಗಿ ಎಸ್ಐಆರ್ ಮಾಡುತ್ತಿದ್ದಾರಾ? ಬದಲಾಗಿ ಕಾಂಗ್ರೆಸ್ ಶಾಸಕರು ಬಿಎಲ್ಒಗಳನ್ನು ದುರ್ಬಳಕೆ ಮಾಡಿಕೊಳ್ತಿದ್ದಾರೆ. ಜಯನಗರದಲ್ಲಿ ಮಸೀದಿ ಒಳಗೆ ಎಸ್ಐಆರ್ ಮಾಡುತ್ತಿದ್ದಾರೆ. ಹಿಂದೂಗಳು ಮಸೀದಿ ಒಳಗೆ ಹೋಗಲು ಸಾಧ್ಯವಾಗದ ರೀತಿ ಆಗಿದೆ. ರಾಜ್ಯ ಸರ್ಕಾರ ಇಲ್ಲಿ ಷಡ್ಯಂತ್ರ ಮಾಡುತ್ತಿದೆ ಎಂದವರು ಆರೋಪಿಸಿದ್ದಾರೆ.
ಎಸ್‌ಐಆರ್ ಹೇಗೆ ಮಾಡ್ಬೇಕು? ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಹೋಗಿ ಪರಿಶೀಲನೆ ಮಾಡ್ಬೇಕು. ಆದರೆ ಇಲ್ಲಿ ಮದುವೆ ಮನೆ, ಮಸೀದಿ ಇನ್ನಿತರ ಜಾಗಳಲ್ಲಿ ಎಸ್‌ಐಆರ್ ಮಾಡ್ತಿದ್ದಾರೆ ಎಂದು ಗರಂ ಆಗಿದ್ದಾರೆ.



