April 28, 2026
Tuesday, April 28, 2026
spot_img

ಪಶ್ಚಿಮ ಬಂಗಾಳದಲ್ಲಿ ಎಸ್ ಐಆರ್: ಬರೋಬ್ಬರಿ 90 ಲಕ್ಷ ಮತದಾರರಿಗೆ ಗೇಟ್ ಪಾಸ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣಾ ಅಖಾಡ ರಂಗೇರುತ್ತಿದ್ದು, ವಿವಿಧ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿವೆ. ಇದರ ನಡುವೆ ಚುನಾವಣಾ ಆಯೋಗವು ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ 90 ಲಕ್ಷ ಮತದಾರರಿಗೆ ಗೇಟ್ ಪಾಸ್ ನೀಡಿದೆ.

ಚುನಾವಣಾ ಹೊತ್ತಿನಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮತದಾರರನ್ನು ಕೈಬಿಟ್ಟಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಜೊತೆಗೆ ಗೆಲುವಿನ ಲೆಕ್ಕಾಚಾರದಲ್ಲಿದ್ದ ಪಕ್ಷಗಳಿಗೆ ದೊಡ್ಡ ಹೊಡೆತ ಸಿಕ್ಕಂತಾಗಿದೆ.

ಎಸ್​ಐಆರ್​ ಪ್ರಕ್ರಿಯೆ ಪ್ರಾರಂಭವಾದಾಗ 63.66 ಲಕ್ಷ ಹೆಸರುಗಳನ್ನೂ ಕೈಬಿಡಲಾಗಿತ್ತು.ಇದರಿಂದ ಒಟ್ಟು ಮತದಾರರ ಸಂಖ್ಯೆ 7.66 ಕೋಟಿಯಿಂದ 7.04 ಕೋಟಿಗೆ ಇಳಿದಿತ್ತು. ಇದರಲ್ಲಿ 60.06 ಲಕ್ಷ ಮಂದಿ ಪರಿಶೀಲನೆಯಲ್ಲಿದ್ದರು.

ಬಳಿಕ ಸುಪ್ರೀಂ ಕೋರ್ಟ್​ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲಾಯಿತು. ಅವರ ಕಣ್ಗಾವಲಿನಲ್ಲಿ 27.16 ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ತೆಗೆದು ಹಾಕಿ, 32.68 ಲಕ್ಷಕ್ಕೂ ಹೆಚ್ಚು ಮತದಾರರನ್ನು ಪಟ್ಟಿಯಲ್ಲಿ ಉಳಿಸಿಕೊಳ್ಳಲಾಯಿತು. ಇದರಿಂದಾಗಿ ಸುಮಾರು 90.83 ಲಕ್ಷ ಹೆಸರು ಡಿಲೀಟ್ ಮಾಡಿದ್ದಂತೆ ಆಗಿದೆ.

ಸದ್ಯ ಪರಿಷ್ಕರಣೆ ಪ್ರಕ್ರಿಯೆಯ ನಂತರ ರಾಜ್ಯದ ಅಂತಿಮ ಮತದಾರರ ಸಂಖ್ಯೆಯನ್ನು ಚುನಾವಣಾ ಆಯೋಗ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಹೀಗಾಗಿ ಅಂತಿಮ ಸಂಖ್ಯೆ ಶೀಘ್ರದಲ್ಲೇ ಸಿಗಲಿದೆ.

ರಾಜ್ಯದ 152 ಕ್ಷೇತ್ರಗಳಲ್ಲಿ ಏಪ್ರಿಲ್ 23ರಂದು ಮತದಾನ ನಡೆಯಲಿದೆ. ಉಳಿದ 142 ಕ್ಷೇತ್ರಗಳಲ್ಲಿ ಏಪ್ರಿಲ್ 29ರಂದು ಮತದಾನ ನಡೆಯಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !