500 ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ‘ಸರ್‌’ ಸಿನಿಮಾ ತೋರಿಸಿದ ಚಿತ್ರತಂಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಧನುಷ್ ಮತ್ತು ನಿರ್ದೇಶಕ ವೆಂಕಿ ಅಟ್ಲೂರಿ ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ʻಸರ್ʼ ಸಿನಿಮಾ ತೆರೆ ಕಂಡಿದ್ದು, ಮೊದಲ ದಿನವೇ ಪಾಸಿಟಿವ್‌ ಟಾಕ್‌ ಪಡೆದು ಸೂಪರ್‌ ಹಿಟ್‌ ಆಗಿತ್ತು. ಕಲೆಕ್ಷನ್ ಕೂಡ ಭಾರೀ ಪ್ರಮಾಣದಲ್ಲಿ ಬರುತ್ತಿದೆ. ಧನುಷ್ ಅಭಿನಯದ ಸಾರ್ ಚಿತ್ರ ಅವರ ವೃತ್ತಿಜೀವನದಲ್ಲಿ ದೊಡ್ಡ ಓಪನಿಂಗ್ಸ್ ಪಡೆಯುತ್ತಿರುವುದು ಗಮನಾರ್ಹ.

ಅದರಲ್ಲೂ ಸಿನಿಮಾ ʻಅಧ್ಯಯನದ ಮೌಲ್ಯʼದ ಬಗ್ಗೆ ಹೆಚ್ಚು ಗಮನ ಹರಿಸಿದೆ.  ಮಾಸ್, ಕಮರ್ಷಿಯಲ್ ಅಂಶಗಳು, ಎಲಿವೇಶನ್‌ಗಳು ಮತ್ತು ಭಾವನಾತ್ಮಕ ದೃಶ್ಯಗಳು ಪ್ರೇಕ್ಷಕರನ್ನು ಕನೆಕ್ಟ್ ಮಾಡುವ ಉತ್ತಮ ಸಂದೇಶವನ್ನು ಹೊಂದಿರುವ ಚಲನಚಿತ್ರಕ್ಕೆ ಬಾಐಇ ಮಾತಿನಿಂದಲೇ ಯಶಸ್ವಿಯಾಗಿದೆ. ಶಿಕ್ಷಣದ ಮಹತ್ವವನ್ನು ಸಿನಿಮಾ ಹೇಳುವುದರಿಂದ ವಿದ್ಯಾರ್ಥಿಗಳು, ಶಿಕ್ಷಕರು ಈ ಸಿನಿಮಾಗೆ ಬರುತ್ತಿದ್ದಾರೆ. ಚಿತ್ರತಂಡದ ಜೊತೆಗೆ ಸಿನಿಮಾ ನೋಡಿದವರೆಲ್ಲರೂ ಖಂಡಿತಾ ಈ ಸಿನಿಮಾ ನೋಡಲೇಬೇಕು ಅಂತಿದಾರೆ ವಿದ್ಯಾರ್ಥಿಗಳು.

ಪಿವಿಆರ್ ಕಂಪನಿಯೊಂದಿಗೆ ಸರ್ ಸಿನಿಮಾ ಯೂನಿಟ್ ಉತ್ತಮ ಕೆಲಸ ಮಾಡಿದೆ. ಸಿನಿಮಾದಲ್ಲಿ ಶಿಕ್ಷಣದ ಬಗ್ಗೆ ಸರ್ ಹೇಳಿರುವುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗೂ ಈ ಸಿನಿಮಾ ತಲುಪಬೇಕು ಎಂಬ ಆಸೆಯಂತೆ. ಹೈದರಾಬಾದ್‌ನ ವಿವಿಧ ಸರ್ಕಾರಿ ಶಾಲೆಗಳ ಸುಮಾರು 500 ವಿದ್ಯಾರ್ಥಿಗಳಿಗೆ ಪಿವಿಆರ್ ಥಿಯೇಟರ್‌ಗಳಲ್ಲಿ ಸರ್ ಚಲನಚಿತ್ರವನ್ನು ಉಚಿತವಾಗಿ ಪ್ರದರ್ಶಿಸಲಾಯಿತು. ಅಷ್ಟೇ ಅಲ್ಲದೇ ಪಾಪ್ ಕಾರ್ನ್, ಕೂಲ್ ಡ್ರಿಂಕ್ಸ್ ಮತ್ತು ಬಲೂನ್ ಗಳನ್ನು ಉಚಿತವಾಗಿ ಚಿತ್ರಘಟಕ ನೀಡಿದೆ. ಚಿತ್ರ ವೀಕ್ಷಿಸಿದ ನಂತರ ಚಿತ್ರ ಹೇಗಿದೆ ಎಂದು ವಿದ್ಯಾರ್ಥಿಗಳಿಂದ ಪ್ರತಿಕ್ರಿಯೆಯನ್ನೂ ಪಡೆಯಲಾಯಿತು. ಸಿನಿಮಾ ನೋಡಿದ ಎಲ್ಲಾ ವಿದ್ಯಾರ್ಥಿಗಳು ಸಿನಿಮಾ ತುಂಬಾ ಚೆನ್ನಾಗಿದೆ ಸರ್ ಎಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಸಿನಿಮಾ ವೀಕ್ಷಿಸಲು ಬಂದು ಥಿಯೇಟರ್‌ನಲ್ಲಿ ಗಲಾಟೆ ಮಾಡುತ್ತಿರುವ ದೃಶ್ಯಗಳನ್ನು ಪಿವಿಆರ್ ಕಂಪನಿ ಹಾಗೂ ಚಿತ್ರಘಟಕ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ದೃಶ್ಯಗಳನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ. ಈ ಸಿನಿಮಾ ಹೆಚ್ಚು ಜನರಿಗೆ ತಲುಪಲಿ ಎಂದು ಆಶಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!