Thursday, March 23, 2023

Latest Posts

ಉಕ್ರೇನ್‌ನಲ್ಲಿ “ಶಾಶ್ವತ ಶಾಂತಿ” ಸ್ಥಾಪನೆ : ಯುಎನ್ ಜನರಲ್ ಅಸೆಂಬ್ಲಿ ಮತದಾನದಿಂದ ದೂರ ಉಳಿದ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಉಕ್ರೇನ್‌ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತವಾದ ಶಾಂತಿಯನ್ನು ಸ್ಥಾಪಿಸುವ ಕುರಿತು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್‌ಜಿಎ) ಉಕ್ರೇನ್‌ನಲ್ಲಿನ ಯುದ್ಧವನ್ನು ಕೊನೆಗೊಳಿಸಲು ಮತ್ತು ತಕ್ಷಣ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ರಷ್ಯಾವನ್ನು ಒತ್ತಾಯಿಸುವ ನಿರ್ಣಯಕ್ಕೆ ಸಂಬಂಧಿಸಿದಂತೆ ಮತ ಚಲಾಯಿಸಿತು. ಈ ಮತದಾನದಿಂದ ಭಾರತ ದೂರ ಉಳಿದಿದೆ.

ಯುಎನ್‌ಜಿಎಯಲ್ಲಿ ಗುರುವಾರ ನಡೆದ ‘ಐತಿಹಾಸಿಕ ಮತದಾನ’ದಲ್ಲಿ, ಉಕ್ರೇನ್‌ನ ಮೇಲಿನ ಆಕ್ರಮಣಕ್ಕಾಗಿ ರಷ್ಯಾವನ್ನು ದೇಶಗಳು ಖಂಡಿಸಿದವು. ಉಕ್ರೇನ್‌ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತವಾದ ಶಾಂತಿಯನ್ನು ಸ್ಥಾಪಿಸುವ ಮನವಿಯೊಂದಿಗೆ ತಕ್ಷಣ ಕೀವ್‌ನಿಂದ ಸೇನೆಯನ್ನು ಹಿಂತೆಗೆದುಕೊಳ್ಳುವಂತೆ ಸಭೆಯಲ್ಲಿ ರಷ್ಯಾವನ್ನು ಒತ್ತಾಯಿಸಿತು.

ಅಸೆಂಬ್ಲಿಯಲ್ಲಿ ನಿರ್ಣಯದ ಪರವಾಗಿ 141 ಮತಗಳು ಚಲಾಯಿಸಿದವು. ಚೀನಾ ಮತ್ತು ಭಾರತ ಸೇರಿದಂತೆ 32 ದೇಶಗಳು ಮತದಾನಕ್ಕೆ ಗೈರುಹಾಜರಾದರು ಮತ್ತು ಏಳು ರಾಷ್ಟ್ರಗಳು ನಿರ್ಣಯಕ್ಕೆ ವಿರುದ್ಧವಾಗಿ ಮತ ಚಲಾಯಿಸಿದವು.

ಯುಎನ್‌ಗೆ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾರತದ ಸ್ಥಾನವನ್ನು ಪುನರುಚ್ಚರಿಸಿದರು ಮತ್ತು ಮಾತುಕತೆ ಮತ್ತು ರಾಜತಾಂತ್ರಿಕತೆಯು ಏಕೈಕ ಕಾರ್ಯಸಾಧ್ಯವಾದ ಮಾರ್ಗವಾಗಿದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!