ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಮತದಾರರ ಪಟ್ಟಿಯ ವಿಷೇಶ ತೀವ್ರ ಪರಿಷ್ಕರಣೆ (SIR) ಗಡುವನ್ನು ಭಾರತೀಯ ಚುನಾವಣಾ ಆಯೋಗ (ECI) ಮತ್ತೆ ವಿಸ್ತರಣೆ ಮಾಡಿದೆ. ಈ ಹಿಂದೆ ಆಗಸ್ಟ್ ಎಂಟರಂದು ಈ ಪ್ರಕ್ರಿಯೆ ಮುಕ್ತಾಯಗೊಳ್ಳಬೇಕಿತ್ತು ಆದರೆ ಈ ದಿನಾಂಕವನ್ನು ಆ. 17ಕ್ಕೆ ಮುಂದೂಡಲಾಗಿದೆ.
ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ (CEO) ಮನವಿ ಅನುಸರಿಸಿ ಭಾರತೀಯ ಚುನಾವಣಾ ಆಯೋಗ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಚುನಾವಣಾ ಆಯೋಗವು ಇಂದು CEOಗೆ ಪರಿಷ್ಕೃತ ವೇಳಾಪಟ್ಟಿಯನ್ನು ತಿಳಿಸಿದೆ. ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳಿಗೆ ತನ್ನ ನಿರ್ಧಾರದ ಬಗ್ಗೆ ತಿಳಿಸಬೇಕು. ಪರಿಷ್ಕೃತ ವೇಳಾಪಟ್ಟಿಯನ್ನು ಲಭ್ಯವಿರುವ ಎಲ್ಲಾ ಮಾಧ್ಯಮಗಳ ಮೂಲಕ ವ್ಯಾಪಕವಾಗಿ ಪ್ರಚಾರ ಮಾಡಬೇಕು ಎಂದು ECI ನಿರ್ದೇಶಿಸಿದೆ. ಇದರ ಜೊತೆಗೆ, ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ಪರಿಷ್ಕೃತ ವೇಳಾಪಟ್ಟಿಯ ಬಗ್ಗೆ ಲಿಖಿತವಾಗಿ ತಿಳಿಸಲು CEO ಗಳನ್ನು ಕೇಳಿದೆ.
ಆ.7ರವರೆಗೆ ಮನೆ ಬಾಗಿಲಿಗೆ ಬಿಎಲ್‌ಒ
ಮನೆ ಬಾಗಿಲಿಗೆ ಪರಿಶೀಲನೆ ಪ್ರಕ್ರಿಯೆ, ಬಿಎಲ್‌ಒಗಳ ಮನೆ ಮನೆ ಭೇಟಿ ಆಗಸ್ಟ್ 17ರವರೆಗೆ ಮುಂದುವರಿಯುತ್ತದೆ. ನಂತರ ಸೆಪ್ಟೆಂಬರ್ 23ರವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಧಿ ಇರುತ್ತದೆ. ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಅಕ್ಟೋಬರ್ 22ರೊಳಗೆ ವಿಲೇವಾರಿ ಮಾಡಲಾಗುತ್ತದೆ. ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27ರಂದು ಪ್ರಕಟಿಸಲಾಗುತ್ತದೆ.



