September 11, 2026
Friday, September 11, 2026
spot_img

SIR ಪರಿಷ್ಕರಣೆ | 24.97 ಲಕ್ಷ ಮತದಾರರಿಗೆ ‘ನೋಟಿಸ್ ಶಾಕ್’: ಸೆ.22ರೊಳಗೆ ಹಕ್ಕು-ಆಕ್ಷೇಪಣೆ ವಿಲೇವಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

SIR ಪ್ರಕ್ರಿಯೆಯಡಿ ರಾಜ್ಯಾದ್ಯಂತ 24.97 ಲಕ್ಷಕ್ಕೂ ಹೆಚ್ಚು ಮತದಾರರಿಗೆ ನೋಟಿಸ್ ನೀಡಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ. ವಿಶೇಷ ತೀವ್ರ ಪರಿಷ್ಕರಣೆ ವೇಳೆ ‘ಮ್ಯಾಪಿಂಗ್ ಇಲ್ಲದಿರುವಿಕೆ’ ಮತ್ತು ‘ವ್ಯತ್ಯಾಸಗಳು’ ಎಂಬ ವರ್ಗಗಳಿಗೆ ಸೇರಿದ ಮತದಾರರಿಗೆ ಮಾತ್ರ ನೋಟಿಸ್ ನೀಡಲಾಗುತ್ತಿದೆ.

ಶೇ.56.99ರಷ್ಟು ಯಶಸ್ವಿ ವಿತರಣೆ

ರಾಜ್ಯಾದ್ಯಂತ ಒಟ್ಟು 43,81,760 ನೋಟಿಸ್‌ಗಳನ್ನು ಸಿದ್ಧಪಡಿಸಲಾಗಿದ್ದು, ಇಲ್ಲಿಯವರೆಗೆ 24,97,075 ನೋಟಿಸ್‌ಗಳನ್ನು ಅಂದರೆ ಶೇ.56.99ರಷ್ಟು ಯಶಸ್ವಿಯಾಗಿ ವಿತರಿಸಲಾಗಿದೆ. ಇನ್ನೂ 18,84,685 ನೋಟಿಸ್‌ಗಳ ವಿತರಣೆ ಬಾಕಿ ಇದೆ.

ಇದನ್ನೂ ಓದಿ:

ಸೆಪ್ಟೆಂಬರ್ 22ರೊಳಗೆ ಎಲ್ಲಾ ಕೆಲಸ ಮುಗಿಸಿ ಬಿಡಬೇಕು

ಅಷ್ಟೇ ಅಲ್ಲದೆ ನೋಟಿಸ್ ಪಡೆದುಕೊಂಡವ ಪೈಕಿ 7,03,710 ಮಂದಿಯ ವಿಚಾರಣೆ ಪೂರ್ಣಗೊಂಡಿದ್ದು, 17,93,365 ವಿಚಾರಣೆಗಳು ಬಾಕಿ ಉಳಿದಿದ್ದು ಸೆಪ್ಟೆಂಬರ್ 12ರೊಳಗೆ ಪೂರ್ಣಗೊಳಿಸಿ, ಸೆಪ್ಟೆಂಬರ್ 22ರೊಳಗೆ ಎಲ್ಲ ಹಕ್ಕು-ಆಕ್ಷೇಪಣೆಗಳನ್ನು ವಿಲೇವಾರಿ ಮಾಡುವ ಗುರಿಯನ್ನು ಅಧಿಕಾರಿಗಳು ಹೊಂದಿದ್ದಾರೆ.

ಸೆ. 19, 20ರಂದು ಎರಡನೇ ವಿಶೇಷ ಅಭಿಯಾನ

ಮತದಾರರ ನೋಂದಣಿಗಾಗಿ ಸೆಪ್ಟೆಂಬರ್ 19 ಮತ್ತು 20ರಂದು ಎರಡನೇ ವಿಶೇಷ ಅಭಿಯಾನ ನಡೆಯಲಿದೆ. SIR ಪ್ರಗತಿ ಪರಿಶೀಲನೆಗಾಗಿ ಸೆಪ್ಟೆಂಬರ್ 9ರಂದು ಮುಖ್ಯ ಚುನಾವಣಾಧಿಕಾರಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಚುನಾವಣಾ ನೋಂದಣಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ, ನೋಟಿಸ್ ವಿತರಣೆ ಹಾಗೂ ವಿಚಾರಣೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !