ಹೊಸ ದಿಗಂತ ಡಿಜಿಟಲ್ ಡೆಸ್ಕ್
ಭಾರತೀಯ ಬೌಲರ್ ಮೊಹಮ್ಮದ್ ಸಿರಾಜ್ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಭಾವನಾತ್ಮಕ ಸಂದೇಶ ಬರೆದಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ತಮ್ಮ ಮತ್ತು ಕೊಹ್ಲಿ ಫೋಟೋ ಹಾಕಿರುವ ಅವರು ಕೊಹ್ಲಿ ಎಂದೆಂದಿಗೂ ತನ್ನ ನಾಯಕ ಎಂದು ಬರೆದಿದ್ದಾರೆ.
“ನನ್ನ ಸುಪರ್ಹೀರೋ, ನೀವು ನನಗೆ ಕೊಟ್ಟ ಪ್ರೋತ್ಸಾಹಕ್ಕೆ ನಾನು ಆಭಾರಿ. ನೀವು ಎಂದೆಂದಿಗೂ ನನ್ನ ಹಿರಿಯ ಸಹೋದರ. ಇಷ್ಟು ವರ್ಷಗಳ ಕಾಲ ನನ್ನ ಮೇಲೆ ವಿಶ್ವಾಸವಿರಿಸಿದ್ದಕ್ಕೆ ಕೃತಜ್ಞತೆಗಳು. ನೀವು ಎಂದೆಂದಿಗೂ ನನ್ನ ನಾಯಕರೇ ಹೌದು, ಕಿಂಗ್ ಕೊಹ್ಲಿ ” ಎಂದು ಅವರು ಬರೆದಿದ್ದಾರೆ.