ಕೈಮಗ್ಗದಲ್ಲಿ ಜಿ-20 ಲೋಗೋ ಹೊಂದಿರುವ ವಿಶೇಷ ವಸ್ತ್ರ ತಯಾರಿಸಿದ ನೇಕಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜಿ20 ಶೃಂಗಸಭೆ ಹಿನ್ನೆಲೆಯಲ್ಲಿ ತೆಲಂಗಾಣ ನೇಕಾರ ಹರಿ ಪ್ರಸಾದ್ ಎರಡು ಮೀಟರ್ ಉದ್ದದ ಬಟ್ಟೆಯ ಮೇಲೆ ಜಿ-20ಶೃಂಗಸಭೆಯ ಲೋಗೋ ನೇಯ್ದಿದ್ದಾರೆ.

ಜಿ20 ಶೃಂಗಸಭೆಯ ಸಂದರ್ಭವಾದ್ದರಿಂದ ರಾಜನ್ನ ಸಿರಿಸಿಲ್ಲಾ ಜಿಲ್ಲೆಯ ನೇಕಾರ ಹರಿ ಪ್ರಸಾದ್ ಅವರು ಮಗ್ಗದ ಮೇಲೆ ವಿಶೇಷ ಬಟ್ಟೆಯನ್ನು ರಚಿಸಿದರು. 2 ಮೀಟರ್ ಉದ್ದದ ಬಟ್ಟೆಯ ಮೇಲೆ ಭಾರತದ ನಕ್ಷೆ, ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಮತ್ತು 20 ರಾಷ್ಟ್ರಗಳ ಮುಖ್ಯಸ್ಥರ ಭಾವಚಿತ್ರಗಳನ್ನು ಅದರಲ್ಲಿ ನೇಯ್ದಿದ್ದಾರೆ. ಬಟ್ಟೆಯ ಎರಡೂ ಬದಿಗಳನ್ನು ಅಂಚುಗಳ ಕೊನೆಯಲ್ಲಿ G20 ಚಿಹ್ನೆ ಇರುವಂತೆ ವಿನ್ಯಾಸ ಮಾಡಲಾಗಿದೆ. ಅದನ್ನು ನೇಯಲು ಒಂದು ವಾರ ಹಿಡಿಯಿತು ಎಂದು ಹರಿಪ್ರಸಾದ್ ಹೇಳಿದ್ದಾರೆ.

ವಿಶೇಷವಾಗಿ ತಯಾರಿಸಿದ ಈ ಬಟ್ಟೆಯನ್ನು ಸಿರಿಸಿಲ್ಲದಲ್ಲಿ ಪ್ರದರ್ಶಿಸಲಾಯಿತು. ಅವಕಾಶ ಸಿಕ್ಕರೆ ಈ ಕಲಾಕೃತಿಯನ್ನು ಸ್ವತಃ ಪ್ರಧಾನಿ ಮೋದಿಯವರಿಗೆ ಉಡುಗೊರೆಯಾಗಿ ನೀಡಬೇಕೆಂಬ ಇಂಗಿತವನ್ನು ಹರಿ ಪ್ರಸಾದ್ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!