ಮೊಟ್ಟ ಮೊದಲ ಬಾರಿ ಹಕ್ಕು ಚಲಾವಣೆ: ಸಹೋದರಿಯರು ಫುಲ್ ಖುಷ್!

ಹೊಸದಿಗಂತ ವರದಿ ಕಲಬುರಗಿ:

ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದ ಬೂತ್ ನಂ-168/167 ರಲ್ಲಿ ಮೊಟ್ಟ ಮೊದಲ ಬಾರಿಗೆ ತಮ್ಮ ಅಧಿಕಾರವನ್ನು ಚಲಾಯಿಸಿ,ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ನಗರದ ಶಹಾಬಜಾರ್ ಗಂಧಿಗುಡಿ ಬಡಾವಣೆಯ ನಿವಾಸಿಗಳಾದ ಕುಮಾರಿ ಶ್ರೀಜಲ್ ಆಳಂದಕರ್ ಹಾಗೂ ಸೌಮ್ಯ ಆಳಂದಕರ್ ಎಂಬುವ ಇಬ್ಬರು ಸಹೋದರಿಯರು ಮೊಟ್ಟ ಮೊದಲ ಬಾರಿಗೆ ತಮ್ಮ ಮತದಾನವನ್ನು ಮಾಡುವ ಮೂಲಕ ಯುವಜತನೆಯ ಹುಮ್ಮಸ್ಸು ತೋರಿಸಿದರು.

ನಂತರ ಮಾತನಾಡಿದ ಶ್ರೀಜಲ್ ಆಳಂದಕರ,ಇದೇ ಮೊದಲ ಬಾರಿಗೆ ನಾನು ನನ್ನ ಮತವನ್ನು ಚಲಾಯಿಸಿದ್ದು,ಅತ್ಯಂತ ಖುಷಿ ಆಗುತ್ತಿದೆ.ದೇಶದ ಹೆಮ್ಮೆಯ ಪ್ರಧಾನಿ ಅವರ ಅಭಿವೃದ್ಧಿ ಕಾಯ೯ಗಳಿಗೆ ದೇಶದ ಯುವ ಸಮೂಹವೇ ಕೊಂಡಾಡುತ್ತಿರುವ ‌ಸಂದರ್ಭದಲ್ಲಿ ನನ್ನ ಮತವನ್ನು ದೇಶದ ಅಭಿವೃದ್ಧಿ,ರಾಜ್ಯದ ಪರವಾಗಿ ಮತವನ್ನು ನೀಡಿದ್ದೇನೆ ಎಂದರು.

ಸೌಮ್ಯ ಆಳಂದಕರ್ ಮಾತನಾಡಿ,ಭಾರತದ ಹೆಸರನ್ನು ವಿಶ್ವದ ಜಾಗತಿಕ ಮಟ್ಟದಲ್ಲಿ ಎತ್ತರಕ್ಕೆ ಒಯ್ಯುವ ಮೂಲಕ ಪ್ರತಿಯೊಬ್ಬ ಭಾರತೀಯರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಒಳ್ಳೆಯ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ದೇಶದ ಸಮಗ್ರ ಅಭಿವೃದ್ಧಿಗೆ ನನ್ನ ಬೆಂಬಲ ಇದ್ದು,ಮೊದಲ ಬಾರಿಗೆ ಮತದಾನ ಮಾಡಿದ್ದಕ್ಕೆ ಅತ್ಯಂತ ಪ್ರೌಡ್ ಫೀಲ್ ಆಗತಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!