CINE| ಅಪ್ಪನಂತೆಯೇ ಮಗಳು, ಸಿತಾರಾ ಸಾಮಾಜಿಕ ಕಳಕಳಿಗೆ ಹೆಚ್ಚಿದ ಪ್ರಶಂಸೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಿತಾರಾ ಘಟ್ಟಮನೇನಿ, ಥೇಟ್‌ ಅಪ್ಪನಂತಯೇ ಸಹೃದಯಿ. ಬಡವರನ್ನು ಕಂಡರೆ ಮರುಗುವ ದಯಾಮಯಿ. ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತಮ್ಮದೇ ಆದ ಐಡೆಂಟಿಟಿ ಪಡೆದಿದ್ದಾರೆ. ವಯಸ್ಸು ಚಿಕ್ಕದಾದರೂ ಮಾಡುವ ಕೆಲಸ ಮಾತ್ರ ಬೆಟ್ಟದಷ್ಟು ದೊಡ್ಡದು.  11ರ ಹರೆಯವಾದರೂ ಶ್ರಮವಹಿಸಿ ಉತ್ತಮ ಕೆಲಸಗಳಿಗೆ ಬೆಂಬಲ ನೀಡುವ ಮೂಲಕ ಸಿತಾರಾ ಎಲ್ಲರಿಗೂ ಮಾರ್ಗದರ್ಶಕರಾಗಿ ನಿಂತಿದ್ದಾರೆ.

ಸಿತಾರಾ ಈಗ ವೈರಲ್ ಸುದ್ದಿಯಲ್ಲಿದ್ದಾರೆ. ಹೈದರಾಬಾದ್‌ನ ಮಾಲ್‌ನಲ್ಲಿ ಮ್ಯಾಕ್ಸ್ ಬ್ರಾಂಡ್ ಶೋರೂಮ್ ತೆರೆಯಲಾಗಿದ್ದು, ಈ ಕಾರ್ಯಕ್ರಮಕ್ಕೆ ಸಿತಾರಾ ಜೊತೆಗೆ ನಮ್ರತಾ ಶಿರೋಡ್ಕರ್ ಕೂಡ ಅತಿಥಿಗಳಾಗಿ ಹೋಗಿದ್ದರು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಕೆಲವು ಬಡ ವೃದ್ಧರಿಗೆ MAX ಬ್ರ್ಯಾಂಡ್ ಬಟ್ಟೆಗಳನ್ನು ನೀಡಲಾಯಿತು. ಅವುಗಳನ್ನು ಸಿತಾರ ಕೈಯಿಂದ ನೀಡಲಾಯಿತು.

ಒಂದಷ್ಟು ವೃದ್ಧರನ್ನು ವೇದಿಕೆಗೆ ಕರೆದು, ವೃದ್ಧೆಯೊಬ್ಬರು ಹತ್ತಲು ಹರಸಾಹಸ ಪಡುತ್ತಿದ್ದಾಗ ಸಿತಾರಾ ಕೆಳಗಿಳಿದು ಕೈ ಹಿಡಿದು ಕರೆತಂದರು. ಈ ವಿಡಿಯೋ ವೈರಲ್ ಆಗಿದೆ. ತಂದೆಯಂತೆ ಸಿತಾರಾ ಕೂಡ ತುಂಬಾ ಒಳ್ಳೆಯ ಹುಡುಗಿ ಎಂದು ಹೊಗಳುತ್ತಿದ್ದಾರೆ. ಉಡುಗೊರೆ ಪಡೆದ ಬಳಕ ವೃದ್ಧೆಯೊಬ್ರು ಸಿತಾರಾಗೆ ಮುತ್ತಿಟ್ಟು ಆಶೀರ್ವಾದ ಮಾಡಿದಳು. ಸಿತಾರ ಮುಗುಳ್ನಕ್ಕು ಕೈ ಕುಲುಕಿ ಅಲ್ಲಿದ್ದ ದೊಡ್ಡವರೆಲ್ಲರ ಜೊತೆ ಚೆನ್ನಾಗಿ ಮಾತಾಡಿದಳು. ಇದರಿಂದ ಈ ವಿಡಿಯೋಗಳು ವೈರಲ್ ಆಗಿವೆ.

ಸಿತಾರ ದಿನದಿಂದ ದಿನಕ್ಕೆ ಒಳ್ಳೆಯ ಕೆಲಸ ಮಾಡುತ್ತಾ ಎಲ್ಲರಿಗೂ ಮಾದರಿಯಾಗಿ ನಿಲ್ಲುತ್ತಿರುವುದಕ್ಕೆ ಅಭಿಮಾನಿಗಳು, ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!