ಹೊಸದಿಗಂತ ಡಿಜಿಟಲ್ ಡೆಸ್ಕ್
ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಸಂಭ್ರಮ ಜೋರಾಗಿದ್ದು, ರಕ್ಷಿತಾ ಪ್ರೇಮ್ ಸಹೋದರ ನಟ ರಾಣಾ, ಜಯಮಾಲಾ ಪುತ್ರಿ ಸೌಂದರ್ಯ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈಗ ʼಸೀತಾರಾಮʼ ಧಾರಾವಾಹಿ ನಟಿ ಮೇಘನಾ ಶಂಕರಪ್ಪ ಅವರು ಕೂಡ ಹೊಸ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಫೆಬ್ರವರಿ 9ರಂದು ಬೆಂಗಳೂರಿನಲ್ಲಿ ಮೇಘನಾ ಶಂಕರಪ್ಪ ಹಾಗೂ ಜಯಂತ್ ಮದುವೆ ನಡೆದಿದೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಮೇಘನಾ ಅವರು ಈ ಹಿಂದೆ ಪ್ರಿ ವೆಡ್ಡಿಂಗ್, ಅರಿಷಿಣ ಶಾಸ್ತ್ರ, ಮೆಹೆಂದಿ, ಸಂಗೀತದ ವಿಡಿಯೋಗಳನ್ನು ಹಂಚಿಕೊಂಡಿದ್ದರು. ಇನ್ನಷ್ಟೇ ಮದುವೆ ಫೋಟೋ ಹಂಚಿಕೊಳ್ಳಬೇಕಿದೆ. ಅಂದಹಾಗೆ ಸೋಶಿಯಲ್ ಮೀಡಿಯಾದಲ್ಲಿ ಮೇಘನಾ ಅವರ ಮದುವೆ ವಿಡಿಯೋಗಳು ವೈರಲ್ ಆಗುತ್ತಿವೆ. ಅನೇಕರು ಮೇಘನಾಗೆ ಮದುವೆಯ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.