Saturday, April 1, 2023

Latest Posts

ಭಾರತ-ಚೀನಾ ಗಡಿಯಲ್ಲಿ ಪರಿಸ್ಥಿತಿ ಹೇಗಿದೆ? ಲೆಫ್ಟಿನೆಂಟ್ ಜನರಲ್ ಕಲಿತಾ ಹೇಳಿದ್ದೇನು?!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚೀನಾದೊಂದಿಗಿನ ಉತ್ತರ ಗಡಿ ಪ್ರದೇಶದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ, ಪರಿಸ್ಥಿತಿ ಯಾವಾಗ ಮತ್ತು ಹೇಗೆ ಬದಲಾಗುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ ಎಂದು ಲೆಫ್ಟಿನೆಂಟ್ ಜನರಲ್ ಆರ್‌ಪಿ ಕಲಿತಾ ಹೇಳಿದ್ದಾರೆ. ಚೀನಾದ ಗಡಿಯಲ್ಲಿರುವ LAC (ವಾಸ್ತವ ನಿಯಂತ್ರಣ ರೇಖೆ) ಉದ್ದಕ್ಕೂ ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ಪ್ರದೇಶಗಳ ಜವಾಬ್ದಾರಿ ಇವರ ಮೇಲಿದೆ.

ಕೋಲ್ಕತ್ತಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಡಿ ಭದ್ರತೆಯ ಬಗ್ಗೆ ಪ್ರಮುಖ ವಿಷಯಗಳನ್ನು ಮಾತನಾಡಿದರು. ಭಾರತ-ಚೀನಾ ನಡುವಿನ ಗಡಿಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದರಿಂದ ಸಮಸ್ಯೆ ಉದ್ಭವಿಸುತ್ತಿದೆ. ಸಮಸ್ಯೆಗಳಿಗೆ ಕಾರಣವೆಂದರೆ LAC ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಈಗ ಚೀನಾದ ಉತ್ತರ ಗಡಿ ಪ್ರದೇಶದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ, ಗಡಿಗೆ ಸಂಬಂಧಿಸಿದಂತೆ ಎರಡೂ ದೇಶಗಳು ವಿಭಿನ್ನ ನಿರೀಕ್ಷೆಗಳನ್ನು ಹೊಂದಿರುವುದರಿಂದ ಪರಿಸ್ಥಿತಿ ಯಾವಾಗ ಮತ್ತು ಹೇಗೆ ಎಂದು ಊಹಿಸಲು ಅಸಾಧ್ಯವಾಗಿದೆ. ಗಡಿ ಭದ್ರತೆಯನ್ನು ಕಾಪಾಡುವಲ್ಲಿ ಪೂರ್ವ ಭಾಗದಲ್ಲಿ ಸೇನೆಯ ಪಾತ್ರ ನಿರ್ಣಾಯಕವಾಗಿದೆ. ಸಿಬ್ಬಂದಿ ಸಂಪೂರ್ಣ ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತಿದ್ದಾರೆ.

ಎದುರಾಗುವ ಸಮಸ್ಯೆಗಳನ್ನು ನಾವು ನಿರಂತರವಾಗಿ ಪರಿಶೀಲಿಸುತ್ತಿದ್ದೇವೆ ಎಂದು ಲೆಫ್ಟಿನೆಂಟ್ ಜನರಲ್ ಆರ್.ಪಿ.ಕಲಿತ ಹೇಳಿದರು.

ಡಿಸೆಂಬರ್ 9 ರಂದು ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶದಲ್ಲಿ ಚೀನಾ ಮತ್ತು ಭಾರತೀಯ ಸೈನಿಕರ ನಡುವೆ ಮತ್ತೊಮ್ಮೆ ಸಂಘರ್ಷ ನಡೆದಿರುವುದು ಗೊತ್ತೇ ಇದೆ. ಈ ಘಟನೆಯಲ್ಲಿ 35 ಭಾರತೀಯ ಸೈನಿಕರು ಮತ್ತು 40 ಚೀನಾ ಸೈನಿಕರು ಗಾಯಗೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ನಾವು ಚೀನಾದ ಗಡಿ ಪ್ರದೇಶದಲ್ಲಿನ ಪರಿಸ್ಥಿತಿಯನ್ನು ನಿರಂತರವಾಗಿ ಮೌಲ್ಯಮಾಪನ ಮಾಡುತ್ತಿದ್ದೇವೆ ಮತ್ತು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿದ್ದೇವೆ ಎಂದು ಕಲಿತಾ ಹೇಳಿದರು.

ಮತ್ತೊಂದೆಡೆ, ಚೀನಾ ನಿರಂತರವಾಗಿ ತನ್ನ ಸೇನೆಯನ್ನು ಹೆಚ್ಚಿಸುತ್ತಿದೆ ಮತ್ತು ಗಡಿಯಲ್ಲಿ ನಿರ್ಮಾಣಗಳನ್ನು ಕೈಗೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಇನ್ನೊಂದೆಡೆ ಗಡಿಯಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ನಮ್ಮ ಕಡೆಗೂ ಮೂಲಸೌಕರ್ಯ ಹೆಚ್ಚಿಸಲಾಗುತ್ತಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!