ವಿಮಾನ ನಿಲ್ದಾಣದ ಕಸದ ಬಡ್ಡಿಯಲ್ಲಿ ಸಿಕ್ಕಿತು ಆರು ಚಿನ್ನದ ಗಟ್ಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಲಖನೌದ ಚೌಧರಿ ಚರಣ್​ ಸಿಂಗ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸದ ಬಡ್ಡಿಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಆರು ಚಿನ್ನದ ಗಟ್ಟಿಗಳು ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಡಸ್ಟ್​ಬಿನ್​ನಲ್ಲಿ ಈ ಚಿನ್ನವನ್ನು ಎಸೆದವರ ಪತ್ತೆಗಾಗಿ ಕಸ್ಟಮ್ಸ್​ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಆರು ಚಿನ್ನದ ಗಟ್ಟಿಗಳನ್ನು ಕಪ್ಪು ಟೇಪ್​​ನಿಂದ ಸುತ್ತಿ, ಪ್ಲಾಸ್ಟಿಕ್​ ಕವರ್​ನಲ್ಲಿ ಬಚ್ಚಿಟ್ಟು ವಲಸೆ ವಿಭಾಗದ ಸಮೀಪದ ಡಸ್ಟ್​ಬಿನ್​ನಲ್ಲಿ ಹಾಕಲಾಗಿದೆ. ಇದರ ಮಾರುಕಟ್ಟೆ ಮೌಲ್ಯ ಅಂದಾಜು 36.60 ಲಕ್ಷ ರೂ. ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಚಿನ್ನದ ಬಿಸ್ಕಟ್​ಗಳು ಯಾರಿಗೆ ಸೇರಿದ್ದು ಎಂಬುವುದು ಗೊತ್ತಾಗಿಲ್ಲ. ವಿಮಾನ ನಿಲ್ದಾಣದ ಅಧಿಕಾರಿಗಳು ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!