October 10, 2026
Saturday, October 10, 2026
spot_img

ರೈಲಿನಲ್ಲಿ ಸೀಟಿನ ವಿಚಾರಕ್ಕೆ ಜಗಳ: ಆರು ಮಂದಿ ಪ್ರಯಾಣಿಕರಿಗೆ ಗಾಯ

ಹೊಸ ದಿಗಂತ ವರದಿ, ಮಂಡ್ಯ:

ಸೀಟಿನ ವಿಚಾರಕ್ಕೆ ಪ್ರಯಾಣಿಕರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಪರಿಣಾಮ ಯುವಕರ ಗುಂಪು ಪ್ರಯಾಣಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರಾಜರಾಣಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಮದ್ದೂರಿನ ಚನ್ನೇಗೌಡನದೊಡ್ಡಿ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ.

ಮಂಡ್ಯದಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದ ಮಧುಗಿರಿ ತಾಲೂಕಿನ ಬಡವನಹಳ್ಳಿಯ ಶಿವಕುಮಾರ್ (44), ಚನ್ನೇಗೌಡನದೊಡ್ಡಿಯ ಗೇಟ್‌ಮನ್ ಕುಮಾರ (36), ಚನ್ನೇಗೌಡನದೊಡ್ಡಿಯ ಶಿವಕುಮಾರ್ (40) ಹಾಗೂ ಯುವಕರಾದ ಮೈಸೂರಿನ ಗೌಸಿಯಾನಗರದ ಖುರೇಶಿ (27), ವಾಸಿಂ (23), ಕ್ಯಾತನಹಳ್ಳಿಯ ಶೋಯೇಬ್ (20) ಎಂಬುವರು ಗಾಯಗೊಂಡವರಾಗಿದ್ದಾರೆ.

Must Read