ಹೊಸದಿಗಂತ ಡಿಜಿಟಲ್ ಡೆಸ್ಕ್ :
ಅಮೆರಿಕದ ಟೆನ್ನೆಸ್ಸೀ ಬಳಿಯ ಮಿಸ್ಸಿಸ್ಸಿಪ್ಪಿ ಪಟ್ಟಣದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದೆ.
ಹಂತಕನೋರ್ವನ ಗುಂಡಿನ ದಾಳಿಗೆ ಆರು ಮಂದಿ ಮೃತಪಟ್ಟಿದ್ದಾರೆ, ಶಂಕಿತ ರಿಚರ್ಡ್ ಡೆಲ್ ಕ್ರೋಮ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಅಂಗಡಿ, ಹಾಗೂ ಎರಡು ಮನೆಗಳ ಮೇಲೆ ಏಕಾಏಕಿ ದಾಳಿ ನಡೆಸಿದ್ದು, ಆರು ಮಂದಿ ಮೃತಪಟ್ಟಿದ್ದಾರೆ, ದಾಳಿಗೆ ನಿಖರ ಕಾರಣ ತಿಳಿದುಬಂದಿಲ್ಲ. ನಮ್ಮ ಪಕ್ಕದ ಮನೆ ಬಳಿ ಗುಂಡಿನ ಶಬ್ದ ಕೇಳಿಸಿದಂತೆ ಆಯ್ತು, ವ್ಯಕ್ತಿಯೊಬ್ಬ ಕೈಯಲ್ಲಿ ಬಂದೂಕು ಹಿಡಿದು ನಡೆಯುತ್ತಿದ್ದ. ನಾನು ಸೀದ ಮನೆಯೊಳಗೆ ಹೋಗಿ ನೋಡಿದೆ, ವ್ಯಕ್ತಿಯ ನಾಡಿಮಿಡಿತ ಹಿಡಿದೆ, ಆತ ಮೃತಪಟ್ಟಿದ್ದ ಎಂದು ಸ್ಥಳೀಯ ನಿವಾಸಿ ಹೇಳಿದ್ದಾರೆ.