Thursday, March 23, 2023

Latest Posts

SHOCKING | ಬೆಂಗಳೂರಿನಲ್ಲಿ ಯುವಕರಿಗೇ ಚಿಕನ್ ಪಾಕ್ಸ್ ಭೀತಿ ಹೆಚ್ಚು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇದೀಗ ಚಳಿಗಾಲದಿಂದ ಬೇಸಿಗೆ ಕಾಲಕ್ಕೆ ಬೆಂಗಳೂರು ಬದಲಾಗುತ್ತಿದೆ, ಈ ಸಮಯದಲ್ಲಿ ಚಿಕನ್ ಪಾಕ್ಸ್ ಭೀತಿ ಹೆಚ್ಚಾಗಿದೆ. ಬೇಸಿಗೆ ಕಾಲದಲ್ಲಿ ಹೆಚ್ಚು ಯುವಕರಿಗೆ ಚಿಕನ್ ಪಾಕ್ಸ್ ತಗುಲುವ ಅವಕಾಶ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದು ಸಾಮಾನ್ಯವಾಗಿ ಮಕ್ಕಳಿಗೆ ಕಾಡುವ ಸೋಂಕಾಗಿದೆ, ಆದರೆ ಯುವಕರಿಗೂ ಸೋಂಕು ತಗುಲುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಬೇಸಿಗೆಯಲ್ಲೇ ಚಿಕನ್ ಪಾಕ್ಸ್ ಪ್ರಕರಣಗಳು ಹೆಚ್ಚಾಗುತ್ತವೆ, ಹವಾಮಾನ ಬದಲಾವಣೆಯಿಂದ ರೋಗ ಹರಡುವಿಕೆ ಹೆಚ್ಚಾಗುತ್ತದೆ. ಗರ್ಭಿಣಿಯರು ಈ ಸಮಯದಲ್ಲಿ ಆದಷ್ಟು ಎಚ್ಚರ ವಹಿಸಬೇಕು, ತೊಂದರೆಗಳನ್ನು ತಪ್ಪಿಸಲು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು, ಮನೆಯಲ್ಲಿ ಯಾರಿಗಾದರೂ ಸೋಂಕು ತಗುಲಿದರೆ ಅವರಿಂದ ದೂರ ಇರಬೇಕು, ಅವರ ಬಟ್ಟೆಗಳನ್ನು ಬಳಸಬಾರದು ಎಂದು ಸಕ್ರಾ ವರ್ಲ್ಡ್ ಹಾಸ್ಪಿಟಲ್ ಪೀಡಿಯಾಟ್ರಿಕ್ಸ್ ಮತ್ತು ನಿಯೋನಾಟಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ರಜತ್ ಆತ್ರೇಯ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!