Tuesday, March 28, 2023

Latest Posts

ಈಜಲು ತೆರಳಿದ್ದವರು ನೀರುಪಾಲು: ಐದು ಮೃತದೇಹಗಳು ಪತ್ತೆ, ಇನ್ನೊಬ್ಬರಿಗಾಗಿ ಶೋಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನೆಲ್ಲೂರು ಜಿಲ್ಲೆಯ ಪೊದನುಕೂರು ಮಂಡಲದ ತೊಡೇರು ಹೊಂಡದಲ್ಲಿ ಈಜಲು ಹೋಗಿ ಆರು ಮಂದಿ ನೀರುಪಾಲಾಗಿರುವ ದಾರುಣ ಘಟನೆ ನಡೆದಿದೆ. ಕೆರೆಯಲ್ಲಿ ನಾಪತ್ತೆಯಾಗಿದ್ದ ಆರು ಯುವಕರ ಪೈಕಿ ಐವರ ಮೃತದೇಹಗಳನ್ನು ಗಜ ಈಜುಗಾರರು ಹೊರತೆಗೆದಿದ್ದಾರೆ. ಮತ್ತೊಬ್ಬರಿಗಾಗಿ ಶೋಧ ಮುಂದುವರಿದಿದೆ. ಕಲ್ಯಾಣ್, ಪ್ರಶಾಂತ್, ರಘು, ಶ್ರೀನಾಥ್ ಮತ್ತು ಬಾಲಾಜಿ ಅವರ ಮೃತದೇಹಗಳನ್ನು ಗಜ ಈಜುಗಾರರು ಮತ್ತು ಸ್ಥಳೀಯರು ಕೆರೆಯಿಂದ ಹೊರತೆಗೆದರು. ಮತ್ತೋರ್ವ ಯುವಕ ಸುರೇಂದ್ರನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಹತ್ತು ಯುವಕರು ನಿನ್ನೆ (ಭಾನುವಾರ) ಸಂಜೆ ದೋಣಿ ವಿಹಾರಕ್ಕೆ ತೆರಳಿದ್ದರು. ದೋಣಿ ಪಲ್ಟಿ ಹೊಡೆದು ಯುವಕರು ನೀರಿಗೆ ಬಿದ್ದಿದ್ದಾರೆ. ನಾಲ್ವರು ಸುರಕ್ಷಿತವಾಗಿ ದಡ ತಲುಪಿದ್ದಾರೆ. ಉಳಿದ ಆರು ಮಂದಿ ಕೆರೆಯಲ್ಲಿ ನಾಪತ್ತೆಯಾಗಿದ್ದಾರೆ. ಸಚಿವ ಕಾಕಣಿ ಗೋವರ್ಧನ್ ರೆಡ್ಡಿ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ತಮ್ಮ ಗ್ರಾಮದಲ್ಲಿ ಇಂತಹ ದೊಡ್ಡ ಘಟನೆ ಹಿಂದೆಂದೂ ನಡೆದಿರಲಿಲ್ಲ ಎಂದರು. ಘಟನೆಯನ್ನು ಸಿಎಂ ಜಗನ್ ಅವರ ಗಮನಕ್ಕೆ ತರಲಾಗುವುದು ಮತ್ತು ಸಂತ್ರಸ್ತರ ಕುಟುಂಬಗಳಿಗೆ ಬೆಂಬಲ ನೀಡಲಾಗುವುದು ಎಂದು ಭರವಸೆ ನೀಡಿದರು. ಮತ್ತೊಂದೆಡೆ ಮೃತದೇಹಗಳನ್ನು ಕಂಡು ಕುಟುಂಬಸ್ಥರ ಕಣ್ಣೀರು ಮುಗಿಲು ಮುಟ್ಟಿದೆ. ಯುವಕರ ಸಾವಿನಿಂದ ಗ್ರಾಮದಲ್ಲಿ ದುಃಖದ ಛಾಯೆ ಆವರಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!