ವಾಹನವೇ ಆಗ್ಲಿ, ಸರ್ಕಾರವೇ ಆಗ್ಲಿ ಡಬಲ್ ಇಂಜಿನ್ ಇದ್ದಾಗ ಸ್ಪೀಡ್ ಜಾಸ್ತಿ : ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅದು ವಾಹನವೇ ಆಗಿರಲಿ, ಸರ್ಕಾರವೇ ಆಗಿರಲಿ ಡಬಲ್ ಇಂಜಿನ್ ಇದ್ದಾಗ ಅದರ ವೇಗ ಹೆಚ್ಚಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಶಿವಮೊಗ್ಗದಲ್ಲಿ ನೂತನ ಕುವೆಂಪು ವಿಮಾನ ನಿಲ್ದಾಣ ಉದ್ಘಾಟನೆ ನಂತರ ಸಮಾವೇಶದಲ್ಲಿ ಮಾತನಾಡಿದ್ದಾರೆ.

ಡಬಲ್ ಇಂಜಿನ್‌ನಿಂದ ವೇಗ ಹೆಚ್ಚೋ ವಿಷಯ ಎಲ್ಲರಿಗೂ ಗೊತ್ತಿರುವಂಥದ್ದೇ. ಅಂತಹ ಒಂದು ಡಬಲ್ ಇಂಜಿನ್ ಸರ್ಕಾರ ಕರ್ನಾಟಕದ ಅಭಿವೃದ್ಧಿಯನ್ನು ಹೇಗೆ ಮಾಡುತ್ತಿದೆ ನೀವೇ ನೋಡಿ, ಡಬಲ್ ಇಂಜಿನ್‌ನಿಂದ ರಾಜ್ಯದ ಅಭಿವೃದ್ಧಿ ಹೈ ಸ್ಪೀಡ್‌ನಲ್ಲಿದೆ. ಡಬಲ್ ಇಂಜಿನ್ ಸರ್ಕಾರ ಇನ್ನೊಂದು ಪ್ರಮುಖ ಬದಲಾವಣೆಯಾಗಿ ಶಿವಮೊಗ್ಗಕ್ಕೆ ಏರ್‌ಪೋರ್ಟ್ ಬರುವಂತೆ ಮಾಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!