ಹೊಸದಿಗಂತ ಡಿಜಿಟಲ್ ಡೆಸ್ಕ್ :
ಪ್ರಧಾನಿ ನರೇಂದ್ರ ಮೋದಿಯವರ ಮೂಲ ಮಂತ್ರವಾದ ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ಗೆ ಅನುಗುಣವಾಗಿ ಸೋಮವಾರ ನಗರಕ್ಕೆ ಆಗಮಿಸಲಿರುವ ಮೋದಿ ಅವರನ್ನು ಸ್ವಾಗತಿಸಲು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಆರು ಮಂದಿಯನ್ನು ನಿಯೋಜಿಸಲಾಗಿದೆ.
ಹೈಟೆಕ್ ರೈಲು ನಿಲ್ದಾಣವನ್ನು ಉದ್ಘಾಟಿಸುವ ಮುನ್ನ ಮೋದಿ ನಗರದಲ್ಲಿ 10.5 ಕಿಮೀ ಉದ್ದದ ರೋಡ್ ಶೋ ನಡೆಸಲಿದ್ದಾರೆ. ರೋಡ್ಶೋ ಮಾರ್ಗವನ್ನು ಬಿಜೆಪಿ ಧ್ವಜಗಳು, ವಿವಿಧ ಪೋಸ್ಟರ್ಗಳು ಮತ್ತು ಕೇಸರಿ ವರ್ಣದ ಬ್ಯಾನರ್ಗಳಿಂದ ಅಲಂಕರಿಸಲಾಗಿದೆ.
ಮೋದಿ ಸ್ವಾಗತಿಸುವುದಕ್ಕೆ ಹಲವರ ಹಗ್ಗಜಗ್ಗಾಟದ ನಡುವೆ ಪೌರಕಾರ್ಮಿಕ ಮೀಕಾಶಿ ತಳವಾರ, ಕೃಷಿ ಕಾರ್ಮಿಕ ಶೀಲಾ ಖನ್ನೂಕರ್, ನೇಕಾರ ಕಲ್ಲಪ್ಪ ತಂಬಗಿ, ಆಟೋ ಚಾಲಕ ಮಯೂರ್ ಚವ್ಹಾಣ, ಹೋಟೆಲ್ ಮಾಣಿ ಚಂದ್ರಕಾಂತ ಹೊನಕರ, ಕಟ್ಟಡ ಕಾರ್ಮಿಕ ಮಂಗೇಶ ಬಸ್ತವಾಡಕರ ಎಂಬ ಆರು ಮಂದಿಯನ್ನು ಮೋದಿಯವರ ಸ್ವಾಗತಕ್ಕೆ ನಿಯೋಜಿಸಲಾಗಿದೆ.
ಈ ಆರು ಮಂದಿಗೆ ಪ್ರೋಟೋಕಾಲ್ ಕುರಿತು ಪಾಠಗಳನ್ನು ನೀಡಲಾಗಿದೆ. ಮಧ್ಯಾಹ್ನ ರಾಣಿ ಚೆನ್ನಮ್ಮ ವೃತ್ತದಿಂದ ಪಥಸಂಚಲನ ಆರಂಭವಾಗಲಿದೆ.