ಅನಿಲ ಸೋರಿಕೆ: ಮೂವರು ಮಕ್ಕಳು ಸೇರಿದಂತೆ 16 ಮಂದಿ ದಾರುಣ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್ ಬಳಿಯ ಕೊಳೆಗೇರಿಯಲ್ಲಿ ಅನಿಲ ಸೋರಿಕೆಯಾಗಿ 16 ಜನರು ಸಾವನ್ನಪ್ಪಿದ್ದಾರೆ. ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಬೊಕ್ಸ್‌ಬರ್ಗ್ ಜಿಲ್ಲೆಯ ಸಮೀಪದಲ್ಲಿರುವ ಏಂಜೆಲೊ ಅನೌಪಚಾರಿಕ ವಸಾಹತು ಪ್ರದೇಶದಲ್ಲಿ ಅನಿಲ ಸೋರಿಕೆ ಸಂಭವಿಸಿದೆ.

ಈ ಪ್ರದೇಶದಲ್ಲಿ ಹೇರಳವಾಗಿ ಅಕ್ರಮ ಗಣಿಗಾರಿಕೆ ಚಟುವಟಿಕೆಗಳು ನಡೆಯುತ್ತಿರುವುದಾಗಿ, ಅನಿಲ ಸೋರಿಕೆಯಿಂದಾಗಿ 16 ಜನರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇತರರನ್ನು ಅರೆವೈದ್ಯರ ಸಹಾಯದಿಂದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ತುರ್ತು ಸೇವೆಗಳ ವಕ್ತಾರ ವಿಲಿಯಂ ನುಟ್ಲಾಡಿ ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದ್ದು, 11 ಮಂದಿಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮೃತರಲ್ಲಿ ಐವರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದ್ದಾರೆ. ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಗ್ಯಾಸ್ ಸ್ಫೋಟದ ಕುರಿತು ತುರ್ತು ಸೇವೆಗಳಿಗೆ ಕರೆ ಬಂದಿತ್ತು. ಆದರೆ ಅಲ್ಲಿಗೆ ತಲುಪಿದಾಗ ವಿಷಕಾರಿ ಅನಿಲ ಸೋರಿಕೆ ಕಂಡುಬಂದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಅಕ್ರಮ ಗಣಿಗಾರಿಕೆ ಚಟುವಟಿಕೆಗಳ ಭಾಗವಾಗಿ ಅನಿಲವನ್ನು ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!