ಸಣ್ಣ ವಿಮಾನ ಪತನ, ಇಬ್ಬರ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಣ್ಣ ವಿಮಾನವೊಂದು ಪತನಗೊಂಡು, ಇಬ್ಬರು ಸಾವನ್ನಪ್ಪಿರುವ ಘಟನೆ ಫ್ರಾನ್ಸ್‌ನಲ್ಲಿ ನಡೆದಿದೆ. ಸಣ್ಣ ಪ್ರವಾಸಿ ವಿಮಾನವೊಂದು ಫ್ರಾನ್ಸ್‌ನ ಪೂರ್ವ ಹಾಟ್-ರಿನ್ ಪ್ರದೇಶದಲ್ಲಿ ಪತನಗೊಂಡಿದರುವುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಜರ್ಮನಿಯ ಕಾರ್ಲ್ಸ್‌ರುಹೆಯಿಂದ ಹಾರಾಟ ನಡೆಸುತ್ತಿದ್ದ ವೇಳೆ ಸಣ್ಣ ವಿಮಾನ ನಾಪತ್ತೆಯಾಗಿದೆ. ಪ್ರಸ್ತುತ ಭದ್ರತಾ ಪಡೆಗಳು ವಿಮಾನಕ್ಕಾಗಿ ಹುಡುಕಾಟ ನಡೆಸುತ್ತಿವೆ.

ಅಪಘಾತಕ್ಕೀಡಾದ ವಿಮಾನದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಪೈಲಟ್ ಮತ್ತು ಓರ್ವ ಪ್ರಯಾಣಿಕ ಮೃತಪಟ್ಟಿದ್ದಾರೆ ಎಂದು ಭದ್ರತಾ ಪಡೆಗಳು ತಿಳಿಸಿವೆ. ಈ ಸಣ್ಣ ವಿಮಾನ ಪತನಕ್ಕೆ ಕಾರಣವೇನು ಎಂಬುದನ್ನು ತನಿಖೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ವಿಮಾನ ಪತನದ ಸತ್ಯಾಂಶಗಳು ಬೆಳಕಿಗೆ ಬರಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!