May 8, 2026
Friday, May 8, 2026
spot_img

Skin Care| ಬಿಸಿಲಿನಿಂದ ನಿಮ್ಮ ಪಾದಗಳು ಕಪ್ಪಗಾಗಿವೆಯೇ? ಈ ರೀತಿ ಮಾಡಿದ್ರೆ ಟ್ಯಾನ್ ಎಲ್ಲ ಮಾಯಾ ಆಗುತ್ತೆ ನೋಡಿ

ಹೊರಗೆ ಸ್ವಲ್ಪ ಹೊತ್ತು ನಡೆದರೂ ಸಾಕು… ಮುಖಕ್ಕಿಂತ ಮೊದಲೇ ಕಾಲುಗಳೇ ಬಿಸಿಲಿನ ಹೊಡೆತಕ್ಕೆ ಸಿಕ್ಕಿ ಕಪ್ಪಾಗಿಬಿಡುತ್ತವೆ. ವಿಶೇಷವಾಗಿ ಸ್ಯಾಂಡಲ್ ಅಥವಾ ಚಪ್ಪಲಿ ಹಾಕಿ ಓಡಾಡುವವರಲ್ಲಿ ಕಾಲಿನ ಮೇಲೆ ಟ್ಯಾನ್ ಲೈನ್ ತುಂಬಾ ಸ್ಪಷ್ಟವಾಗಿ ಕಾಣಿಸುತ್ತದೆ. ಆದರೆ ಚಿಂತಿಸೋ ಅಗತ್ಯವೇ ಇಲ್ಲ. ಮನೆಯಲ್ಲೇ ಇರುವ ಕೆಲವು ಸರಳ ವಿಧಾನಗಳಿಂದ ಈ ಟ್ಯಾನ್ ಅನ್ನು ಕಡಿಮೆ ಮಾಡಬಹುದು.

ಮೊಸರು + ಬೆಸನ್ ಪ್ಯಾಕ್
ಒಂದು ಚಮಚ ಮೊಸರು, ಒಂದು ಚಮಚ ಬೆಸನ್ ಮತ್ತು ಸ್ವಲ್ಪ ನಿಂಬೆರಸ ಸೇರಿಸಿ ಪೇಸ್ಟ್ ಮಾಡಿ ಕಾಲಿಗೆ ಹಚ್ಚಿ. 15 ನಿಮಿಷದ ನಂತರ ತೊಳೆಯಿರಿ. ಇದು ಟ್ಯಾನ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಆಲೂಗಡ್ಡೆ ರಸ
ಆಲೂಗಡ್ಡೆಯ ರಸವನ್ನು ಕಾಲಿನ ಮೇಲೆ ಹಚ್ಚಿ 10–15 ನಿಮಿಷ ಬಿಡಿ. ನೈಸರ್ಗಿಕ ಬ್ಲೀಚಿಂಗ್ ಗುಣದಿಂದ ಚರ್ಮದ ಕಪ್ಪುತನ ನಿಧಾನವಾಗಿ ಕಡಿಮೆಯಾಗುತ್ತದೆ.

ಇದನ್ನೂ ಓದಿ:

ಅಲೋವೆರಾ ಜೆಲ್
ರಾತ್ರಿ ಮಲಗುವ ಮುನ್ನ ಅಲೋವೆರಾ ಜೆಲ್ ಹಚ್ಚಿದರೆ ಚರ್ಮ ಸಾಫ್ಟ್ ಆಗಿ ಟ್ಯಾನ್ ಕಡಿಮೆಯಾಗಲು ಸಹಕಾರಿ.

ಸನ್‌ಸ್ಕ್ರೀನ್ ಬಳಸೋದು ಮರೆಯಬೇಡಿ
ಹೊರಗೆ ಹೋಗುವ ಮೊದಲು ಕಾಲುಗಳಿಗೂ ಸನ್‌ಸ್ಕ್ರೀನ್ ಹಚ್ಚಿ. ಇದು ಹೊಸ ಟ್ಯಾನ್ ಆಗುವುದನ್ನು ತಡೆಯುತ್ತದೆ.

ಸ್ವಲ್ಪ ಕಾಳಜಿ ತೆಗೆದುಕೊಂಡರೆ ನಿಮ್ಮ ಕಾಲುಗಳು ಮತ್ತೆ ನೈಸರ್ಗಿಕ ಕಾಂತಿ ಪಡೆಯುತ್ತವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !