ಮುಖದಲ್ಲಿ ಕಾಣಿಸಿಕೊಳ್ಳುವ ಮೊಡವೆಗಳಿಗೆ ಸರಳ ಮನೆಮದ್ದು ನಿಮ್ಮ ಮನೆಯಲ್ಲೇ ಇದೆ. ಒಮ್ಮೆ ಟ್ರೈ ಮಾಡಿ ನೋಡಿ.
ಏಳರಿಂದ ಎಂಟು ತುಳಸಿ ಎಲೆಗಳು ಮತ್ತು ಕೊತ್ತಂಬರಿ ಸೊಪ್ಪು ತೆಗೆದುಕೊಂಡು ಅವುಗಳನ್ನು ಕಲ್ಲಿನಿಂದ ಚೆನ್ನಾಗಿ ಪುಡಿಮಾಡಿ. ನಂತರ ಅದನ್ನು ಸಣ್ಣ ತಟ್ಟೆಯಲ್ಲಿ ಇರಿಸಿ, ಒಂದು ಚಮಚ ಅಲೋವೆರಾ ಜೆಲ್, ಚಿಟಿಕೆ ಕಸ್ತೂರಿ ಅರಿಶಿನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಮೊದಲು, ನಿಮ್ಮ ಮುಖವನ್ನು ಚೆನ್ನಾಗಿ ತೊಳೆದು ಒಣಗಿಸಿ. ನಂತರ ಈ ಮಿಶ್ರಣವನ್ನು ತೆಗೆದುಕೊಂಡು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷಗಳ ನಂತರ ತೊಳೆಯಿರಿ. ನಿಮ್ಮ ಮುಖದ ಮೇಲಿನ ಮೊಡವೆಗಳು ಕೆಲವೇ ದಿನಗಳಲ್ಲಿ ಕ್ರಮೇಣ ಮಾಯವಾಗುತ್ತವೆ. ಸಾಕಷ್ಟು ನೀರು ಕುಡಿಯಲು ಮರೆಯಬೇಡಿ.