BEAUTY TIPS| ಮದುಮಗಳು ಸುಂದರವಾಗಿ ಕಾಣಬೇಕಾ? ಈ ಜಾಗ್ರತೆಗಳನ್ನುಸರಿಸಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಬಹಳ ಮುಕ್ಯವಾದ ಘಟ್ಟ. ಈ ಸಮಯದಲ್ಲಿ ವಧು-ವರರಿಬ್ಬರೂ ಸೆಂಟರ್‌ ಆಫ್‌ ಅಟ್ರಾಕ್ಷನ್‌ ಆಗಲು ಸುಂದರವಾಗಿ ಕಾಣಲು ಏನೆಲ್ಲಾ ಪ್ರಯತ್ನಗಳನ್ನು ಮಾಡ್ತಾರೆ. ಅದಕ್ಕಾಗಿ ಮೇಕಪ್‌, ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯ ಉತ್ಪನ್ನಗಳು, ಫೇಷಿಯಲ್‌ಗಳ ಮೊರೆ ಹೋಗುವುದು ಕಾಮನ್.‌

ಇವುಗಳ ಜೊತೆಗೆ ಚರ್ಮದ ಬಗ್ಗೆ ತುಸು ಕಾಳಜಿ ವಹಿಸಿದರೆ, ಮದುವೆಯಲ್ಲಿ ನೀವು ಮಿಂಚುವುದರಲ್ಲಿ ಎರಡು ಮಾತಿಲ್ಲ.

  • ಮದುವೆಗೂ ಮುನ್ನ ತ್ವಚೆಯ ಆರೈಕೆಯತ್ತ ಗಮನ ಹರಿಸಿ.
  • ಹೊಸ ಉತ್ಪನ್ನಗಳು, ಚಿಕಿತ್ಸೆಗಳು, ಇತ್ಯಾದಿ ತಯಾರಿ ವೇಳೆ ಖಂಡಿತವಾಗಿ ಮದುವೆಗೆ ಎರಡು ಮೂರು ತಿಂಗಳ ಮೊದಲಿನಿಂದ ಬಳಸಲು ಶುರು ಮಾಡಿ.
  • ಪ್ರತಿದಿನ ಸನ್‌ಸ್ಕ್ರೀನ್‌ ಹಚ್ಚುವ ಮೂಲಕ ನಿಮ್ಮ ಚರ್ಮವನ್ನು ಕಾಪಾಡಿಕೊಳ್ಳಿ.
  • ನಿಮ್ಮ ಚರ್ಮವನ್ನು ಒಳಗಿನಿಂದ ತೇವಗೊಳಿಸಲು ಸಾಕಷ್ಟು ನೀರು ಕುಡಿಯಿರಿ.
  • ಚರ್ಮ ಅದನ್ನು ಮೃದುವಾಗಿಡಲು ಹೈಡ್ರೇಟಿಂಗ್ ಮಾಯಿಶ್ಚರೈಸರ್ ಬಳಸಿ.
  • ನಿಮ್ಮ ಚರ್ಮದ ಪ್ರಕಾರವನ್ನು ತಿಳಿಯಲು ಚರ್ಮದ ತಜ್ಞರನ್ನು ಸಂಪರ್ಕಿಸಿ. ಅವರ ಸೂಚನೆಯಂತೆ ದೌಂದರ್ಯವರ್ಧಕಗಳನ್ನು ಆಯ್ಕೆ ಮಾಡಿಕೊಳ್ಳಿ.
  • ಸೂರ್ಯನ ಶಾಖದಿಂದ ನಿಮ್ಮ ಚರ್ಮವನ್ನು ರಕ್ಷಿಸಿ. ಪ್ರತಿದಿನ ಸನ್‌ಸ್ಕ್ರೀನ್ ಬಳಸುವುದರಿಂದ ಯುವಿ ಕಿರಣಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು.
  • ಮದುವೆಗೆ ಮುನ್ನ ನಿದ್ರೆಯನ್ನು ನಿರ್ಲಕ್ಷಿಸಬೇಡಿ. ಹೀಗೆ ಮಾಡುವುದರಿಂದ ತ್ವಚೆ ದಣಿದಂತಾಗುತ್ತದೆ.
  • ಯೋಗ ಮತ್ತು ಧ್ಯಾನ ಮಾಡುವುದರಿಂದ ಒತ್ತಡವನ್ನು ಕಡಿಮೆ ಮಾಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!