ಹಸುಗಳಲ್ಲಿ ಹೆಚ್ಚುತ್ತಿದೆ ಚರ್ಮ ಗಂಟು ಬಾಧೆ, ರೋಗ ಬಂದ ಹಸುವಿನ ಹಾಲು ಕುಡಿಯಬಹುದಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿ ಲಂಪಿ ಚರ್ಮರೋಗ ಹೆಚ್ಚಾಗಿ ಬಾಧಿಸುತ್ತಿದೆ. ಈಗಾಗಲೇ 10 ಕ್ಕೂ ಹೆಚ್ಚು ರಾಜ್ಯದಲ್ಲಿ ಚರ್ಮ ರೋಗ ಬಧಿಸುತ್ತಿದೆ. 25 ಸಾವಿರಕ್ಕೂ ಹೆಚ್ಚು ಹಸುಗಳು ತಮ್ಮ ಪ್ರಾಣ ಕಳೆದುಕೊಂಡಿವೆ.

ಸಾಮಾನ್ಯವಾಗಿ ಈ ಚರ್ಮರೋಗ ಹಸು, ಎಮ್ಮೆ ಹಾಗೂ ಜಿಂಕೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇದು ವೈರಸ್‌ನಿಂದ ಬರುವ ಕಾಯಿಲೆ. ರಕ್ತವನ್ನು ಆಹಾರವಾಗಿ ಬಳಸುವ ಕೀಟಗಳಿಂದ ಇದು ಹರಡುತ್ತದೆ. ಈ ರೋಗ ಬಂದರೆ ಪ್ರಾಣಿ ಮೃತಪಡುತ್ತದೆ.

ರೋಗದ ಲಕ್ಷಣಗಳೇನು?

ತೀವ್ರ ಜ್ವರ
ಹಾಲು ಉತ್ಪಾದನೆ ಕಡಿಮೆ
ಚರ್ಮದ ಮೇಲೆ ಗಂಟು
ಹಸಿವಾಗದೇ ಇರುವುದು
ಮೂಗು, ಕಣ್ಣಿನಿಂದ ನೀರು ಸೋರುವುದು

ಹಾಲು ಕುಡಿಯಬಹುದೇ?
ಈ ರೋಗ ಬಂದ ಹಸುವಿನ ಹಾಲು ಕುಡಿಯಬಹುದು, ಹಾಲಿನ ಗುಣಮಟ್ಟಗೂ ಚರ್ಮರೋಗಕ್ಕೂ ಸಂಬಂಧ ಇಲ್ಲ. ಈ ರೋಗ ಹಸುಗಳಿಂದ ಮನುಷ್ಯರಿಗೆ ಬರುವುದಿಲ್ಲ. ರೋಗದ ಗಂಭೀರತೆ ಮೇಲೆ ಹಾಲಿನ ಸೇವನೆ ನಿರ್ಧರಿಸಲಾಗುವುದು ಎಂದು ವೈದ್ಯರು ಹೇಳುತ್ತಾರೆ.

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!