ನಿಂತಿದ್ದ ಕಾರನ್ನು ಆಟಿಕೆಯಂತೆ ತಳ್ಳುತ್ತಾ ಆಟವಾಡಿದ ಗಜರಾಜ: ಹೊಟ್ಟೆ ಹಿಡಿದು ನಕ್ಕ ಜಾಲತಾಣಿಗರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇಂಟರ್ನೆಟ್‌ನಲ್ಲಿ ಕಾಣಸಿಗುವ ಹಲವಾರು ವೀಡಿಯೊಗಳು ನಿಮಗೆ ದುಃಖ ಅಥವಾ ಸಂತೋಷವನ್ನುಂಟು ಮಾಡುತ್ತವೆ. ಅದರಲ್ಲೂ ಕೆಲವು ವಿಡಿಯೋಗಳು ನಿಮ್ಮ ಹೊಟ್ಟೆ ನೋಯಿಸುವವರೆಗೂ ನಗುವಂತೆ ಮಾಡುತ್ತದೆ. ನೀವು ಇಂಟರ್ನೆಟ್ ಸರ್ಫರ್ ಆಗಿದ್ದರೆ ಅಂತಹ ಹಲವಾರು ಆಸಕ್ತಿದಾಯಕ ಮತ್ತು ತಮಾಷೆಯ ವೀಡಿಯೊಗಳನ್ನು ನೋಡಿರಬಹುದು. ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿರುವ ಆನೆಯೊಂದರ ವಿಡಿಯೋವೊಂದು ನೋಡಿದವರಲ್ಲಿ ನಗು ಉಕ್ಕಿಸುತ್ತಿದೆ.
ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಆನೆಯೊಂದು ದೊಡ್ಡ ಕಾರನ್ನು ಸಣ್ಣ ಆಟಿಕೆಯಂತೆ ತಳ್ಳುತ್ತಿರುವ ದೃಶ್ಯವಿದೆ. ಐಎಫ್‌ಎಸ್‌ ಅಧಿಕಾರಿ ಸುಸಂತ ನಂದಾ ಅವರು ಹಂಚಿಕೊಂಡಿರುವ ಈ  ಕ್ಲಿಪ್‌ನಲ್ಲಿ ಆನೆಯೊಂದು ನೀಲಿ ಬಣ್ಣದ ಕಾರನ್ನು ತಮಾಷೆಯಾಗಿ ಮುಂದೆ ತಳ್ಳುತ್ತಿದೆ.  ಮತ್ತು ಅದನ್ನು ಸಲೀಸಾಗಿ ಒಂದು  ವೃತ್ತವಾಗಿ ತಳ್ಳುವಲ್ಲಿ ಯಶಸ್ವಿಯಾಗುತ್ತದೆ. ದೈತ್ಯ ಆನೆ ಕಾರನ್ನು ಸಂಪೂರ್ಣವಾಗಿ ಒಂದು  ವೃತ್ತಾಕಾರವಾಗಿ ತಳ್ಳಿ ಅದರ ಹಿಂದಿನ ಪಾರ್ಕಿಂಗ್ ಸ್ಥಾನದಲ್ಲಿ ಬಿಟ್ಟು ಮುಂದೆ ಸಾಗುತ್ತದೆ. ಈ ವಿಡಿಯೋ ತಮಾಷೆಯಾಗಿದ್ದು ನೆಟ್ಟಿಗರಲ್ಲಿ ನಗು ಉಕ್ಕಿಸಿದೆ.
ನಿಮಗಾಗಿ ಅಂತಹ ಆಸಕ್ತಿದಾಯಕ ವೀಡಿಯೊ ಇಲ್ಲಿದೆ.

ಈ ವಿಡಿಯೋ ಕ್ಲಿಪ್ 33 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಮತ್ತು ಆನೆಯ ಪರಿಪೂರ್ಣ ರಿವರ್ಸ್ ಪಾರ್ಕಿಂಗ್ ಕೌಶಲ್ಯಕ್ಕೆ ಸಾವಿರಾರು ಜನರು ಶ್ಲಾಘಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!