Thursday, August 18, 2022

Latest Posts

2‌ನೇ ಟೆಸ್ಟ್‌ ಗೆದ್ದು ತಿರುಗೇಟು ನೀಡಿದ ಶ್ರೀಲಂಕಾ: ಹೀನಾಯ ಸೋಲು ಕಂಡ ಪಾಕಿಸ್ತಾನ!

ಹ‌ೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಶ್ರೀಲಂಕಾ ವಿರುದ್ಧ ಗಾಲೆಯಲ್ಲಿ ನಡೆದ 2 ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ ಮೊದಲ ಟೆಸ್ಟ್‌ ಪಂದ್ಯವನ್ನು 4 ವಿಕೆಟ್‌ ಗಳಿಂದ ಗೆದ್ದು ಬೀಗಿದ್ದ ಪಾಕಿಸ್ತಾನಕ್ಕೆ ಎರಡನೇ ಟೆಸ್ಟ್‌ ನಲ್ಲಿ ಶ್ರೀಲಂಕಾ ತಿರುಗೇಟು ನೀಡಿದ್ದು, ಪಾಕ್‌ 246 ರನ್‌ ಗಳ ಹೀನಾಯ ಸೋಲು ಕಂಡಿದೆ.
ಅಂತಿಮ ದಿನದಲ್ಲಿ 508 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನಕ್ಕೆ ಪ್ರಭಾತ್ ಜಯಸೂರ್ಯ ಇನ್ನಿಲ್ಲದಂತೆ ಕಾಡಿದರು. ಪ್ರಭಾತ್‌ ರ 5 ವಿಕೆಟ್ ಸಾಧನೆಯ ಬಲದಿಂದ ಶ್ರೀಲಂಕಾ ಎರಡನೇ ಟೆಸ್ಟ್‌ನಲ್ಲಿ ಪಾಕಿಸ್ತಾನವನ್ನು 246 ರನ್‌ಗಳಿಂದ ಸೋಲಿಸಿ ಸರಣಿಯನ್ನು 2-1 ರಿಂದ ಡ್ರಾ ಮಾಡಿಕೊಂಡಿತು. ಪಾಕ್ ‌ಪರ ನಾಯಕ ಬಾಬರ್ ಅಜಮ್ (81) ಏಕಾಂಗಿ ಹೋರಾಟ ತೋರಿದರೂ ಕೊನೆ ದಿನದಾಟದ ಮೊದಲ ಎರಡು ಅವಧಿಗಳಲ್ಲಿ ತನ್ನ ಒಂಬತ್ತು ವಿಕೆಟ್‌ಗಳನ್ನು ಕಳೆದುಕೊಂಡ ಪಾಕ್ 261 ರನ್‌ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.
ಸಂಕ್ಷಿಪ್ತ ಸ್ಕೋರ್..
ಶ್ರೀಲಂಕಾ ಪ್ರಥಮ ಇನ್ನಿಂಗ್ಸ್‌: 
 378-10 (103 ಓವರ್)‌, ಚಾಂಡಿಮಾಲ್ 80‌, ಓಷಾಡಾ ಫೆರ್ನಾಂಡೋ 50
ಪಾಕಿಸ್ತಾನ ಪ್ರಥಮ ಇನಿಂಗ್ಸ್ : 231-10 (88.1 ಓವರ್) ಅಘಾ ಸಲ್ಮಾನ್ 62‌.
ಶ್ರೀಲಂಕಾ 2ನೇ ಇನಿಂಗ್ಸ್ : 360-8 ಡಿ (91.5 Ov) ಧನಂಜಯ ಡಿ ಸಿಲ್ವ 109, ಕರುಣಾರತ್ನೆ 61
ಪಾಕಿಸ್ತಾನ 2ನೇ ಇನಿಂಗ್ಸ್ : 261-10 (77 Ov)
ಬಾಬರ್ ಅಜಮ್ 81.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!