ಕಪಾಳಮೋಕ್ಷಕ್ಕೊಳಗಾದ ವಿದ್ಯಾರ್ಥಿ ದತ್ತು ಪಡೆಯಲು ಸಿದ್ಧ: ಕೇರಳ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉತ್ತರಪ್ರದೇಶದ ಖುಬ್ಬಾಪುರ ಗ್ರಾಮದಲ್ಲಿ ಶಿಕ್ಷಕಿ ಸೂಚನೆ ಮೇರೆಗೆ ಸಹಪಾಠಿಗಳಿಂದ ಕಪಾಳಮೋಕ್ಷಕ್ಕೊಳಗಾದ ಮುಸ್ಲಿಂ ವಿದ್ಯಾರ್ಥಿಯನ್ನು ದತ್ತು ತೆಗೆದುಕೊಂಡು, ಉಚಿತ ಶಿಕ್ಷಣ ನೀಡಲು ಸಿದ್ಧ ಎಂದು ಕೇರಳದ ಸರ್ಕಾರ ಸೋಮವಾರ ಹೇಳಿದೆ.

ಪೋಷಕರು ಒಪ್ಪಿದರೆ ಶಿಕ್ಷಣ ಇಲಾಖೆ ಬಾಲಕನ ದತ್ತು ತೆಗೆದುಕೊಂಡು ಶಿಕ್ಷಣ ನೀಡಲಿದೆ.

ಎಡಪಂಥೀಯ ಸರ್ಕಾರ ಮತ್ತು ಕೇರಳದ ಜನರು ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಶ್ರಮಿಸುತ್ತಿದ್ದಾರೆ. ಹಿಂಸಾಚಾರ ಪೀಡಿತ ಮಣಿಪುರ ರಾಜ್ಯದ ಮಗುವಿಗೆ ಪ್ರಸ್ತುತ ಕೇರಳದ ಶಾಲೆಯಲ್ಲಿ ಶಿಕ್ಷಣ ನೀಡಲಾಗುತ್ತಿದೆ ಎಂದು ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ಹೇಳಿದ್ದಾರೆ.
ಕಪಾಳಮೋಕ್ಷ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿ ಶಿವನ್ ಕುಟ್ಟಿ ಭಾನುವಾರ ಉತ್ತರ ಪ್ರದೇಶ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!