ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈಡ್ ಡಿಲೇ ಆದರೆ ಕೆಲವು ಕ್ಯಾಬ್ ಚಾಲಕರು ಏನೆಲ್ಲಾ ಕಾರಣ ನೀಡ್ತಾರೆ ಅನ್ನೋದು ಗೊತ್ತೇ ಇದೆ. ಅಲ್ಲಿದಿನಿ, ಇಲ್ಲಿದಿನಿ, ಕ್ರಾಸ್ ಹತ್ರ ಬನ್ನಿ ಹೀಗೆ ಸಾವಿರ ಕಾರಣಗಳನ್ನು ನೀಡ್ತಾರೆ. ಆದರೆ ಇಲ್ಲೊಬ್ಬರು ಉಬರ್ ಡ್ರೈವರ್ ಜೆನ್ಯೂನ್ ಆದ ಕಾರಣ ಕೊಟ್ಟು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನನಗೆ ನಿದ್ದೆ ಬರ‍್ತಿದೆ, ರೈಡ್ ಕ್ಯಾನ್ಸಲ್ ಮಾಡಿ ಎಂದು ಹೇಳಿದ್ದಾರೆ. ಗ್ರಾಹಕರು ಅದಕ್ಕೆ ಒಕೆ ಎಂದು ಹೇಳಿದ್ದಾರೆ. ಆಶಿ ಎನ್ನುವವರು ಕ್ಯಾಬ್ ಬುಕ್ ಮಾಡಿದ್ದರು, ಭರತ್ ಎನ್ನುವವರು ಪಿಕಪ್ ಮಾಡಬೇಕಿತ್ತು. ಆದರೆ ಅವರು ಬರೋದಕ್ಕೆ ಆಗೋದಿಲ್ಲ ಎಂದಿದ್ದಾರೆ. ಅದಕ್ಕೆ ನನಗೆ ನಿದ್ದೆ ಬರ‍್ತಿದೆ ಎನ್ನುವ ಕಾರಣವನ್ನೂ ನೀಡಿದ್ದಾರೆ.
Tired after a day of hustling at @peakbengaluru pic.twitter.com/XB6QnBWzO6
— Ashi (@ashimhta) January 25, 2023
ಈ ಬಗ್ಗೆ ಆಶಿ ಟ್ವೀಟ್ ಮಾಡಿದ್ದಾರೆ. ಈ ಹಿಂದೆ ಡ್ರೈವರ್ ಒಬ್ಬರು ಅರ್ಧ ದಾರಿಯಲ್ಲಿ ನಿದ್ದೆ ಬರ‍್ತಿದೆ ಎಂದು ನನ್ನನ್ನು ಕೆಳಗೆ ಇಳಿಸಿದ್ದರು. ಆದರೆ ಇವರು ನನಗೆ ನಿದ್ದೆ ಬರ‍್ತಿದೆ ಡ್ರೈವ್ ಮಾಡೋಕೆ ಆಗೋದಿಲ್ಲ ಎಂದು ಹೇಳಿದ್ದಾರೆ ಎಂದು ಖುಷಿಪಟ್ಟಿದ್ದಾರೆ.