Tuesday, May 30, 2023

Latest Posts

ಜಾರ್ಖಂಡ್: ಧನಬಾದ್ ಆಸ್ಪತ್ರೆಯ ವಸತಿ ಗೃಹದಲ್ಲಿ ಅಗ್ನಿ ಅವಘಡ, ಐವರ ಸಾವು !

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಜಾರ್ಖಂಡ್​​ನ ಧನಾಬಾದ್​​​ನಲ್ಲಿರುವ ಆಸ್ಪತ್ರೆಯೊಂದರ ವಸತಿಗೃಹದಲ್ಲಿ ಅಗ್ನಿ ದುರಂತ ಸಂಭವಿಸಿದ್ದು ವೈದ್ಯ, ಆತನ ಪತ್ನಿ ಸೇರಿ ಐವರು ಮೃತಪಟ್ಟಿದ್ದಾರೆ.

ಶನಿವಾರ ಬೆಳಗ್ಗೆ ಈ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಮೃತಪಟ್ಟವರನ್ನು ವೈದ್ಯಕೀಯ ಸಂಸ್ಥೆಯ ಮಾಲೀಕ ಡಾ.ವಿಕಾಸ್ ಹಜ್ರಾ, ಅವರ ಪತ್ನಿ ಡಾ.ಪ್ರೇಮಾ ಹಜ್ರಾ, ಅವರ ಸೋದರಳಿಯ ಸೋಹನ್ ಖಮರಿ ಮತ್ತು ಮನೆಯ ಸಹಾಯಕಿ ತಾರಾದೇವಿ ಎಂದು ಗುರುತಿಸಲಾಗಿದೆ.

ಸ್ಟೋರ್ ರೂಮ್‌ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಉಸಿರುಗಟ್ಟಿದ ಕಾರಣ ಮಾಲೀಕರು ಮತ್ತು ಅವರ ಪತ್ನಿ ಸೇರಿದಂತೆ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಓರ್ವ ವ್ಯಕ್ತಿಯೂ ಗಾಯಗೊಂಡಿದ್ದಾರೆ ಎಂದು ಧನ್ಬಾದ್ ಡಿಎಸ್ಪಿ (ಕಾನೂನು ಮತ್ತು ಸುವ್ಯವಸ್ಥೆ) ಅರವಿಂದ್ ಕುಮಾರ್ ಬಿನ್ಹಾ ಹೇಳುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!