ಚಲಿಸುತ್ತಿದ್ದ ಲಾರಿ ಟಯರ್ ಸ್ಫೋಟ: ಟೋಲ್‌ಗೇಟ್‌ಗೆ ಡಿಕ್ಕಿ

ಹೊಸದಿಗಂತ ವರದಿ,ವಿಜಯಪುರ:

ಚಲಿಸುತ್ತಿದ್ದ ಲಾರಿಯ ಟಯರ್ ಸ್ಫೋಟಗೊಂಡು ಟೋಲ್‌ಗೇಟ್‌ಗೆ ಡಿಕ್ಕಿಯಾಗಿ ಟಯರ್ ಹೊತ್ತಿ ಉರಿದಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಬಳಿ ಭಾನುವಾರ ಸಂಜೆ ನಡೆದಿದೆ.

ಮೆಹಬೂಬ್‌ಸಾಬ್ ಎಂಬುವರ ಕೆಎ 50 ಎ 7011 ಲಾರಿ ಬೆಂಕಿಗಾಹುತಿ ಆಗಿದ್ದು, ವೇಗವಾಗಿ ಚಲಿಸುತ್ತಿದ್ದ ವೇಳೆ ಲಾರಿ ಟಯರ್ ಸ್ಫೋಟಗೊಂಡಿದ್ದು, ಈ ವೇಳೆ ಟೋಲ್‌ಗೇಟ್‌ಗೆ ಲಾರಿ ಡಿಕ್ಕಿಯಾಗಿ ಬೆಂಕಿ ಆವರಿಸಿ ಟಯರ್ ಭಸ್ಮವಾಗಿದೆ.

ಸುದ್ದಿ ತಿಳಿದ ಸಿಂದಗಿ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!