ಬಾಂಗ್ಲಾದೇಶ ವಿರುದ್ಧ ನಿಧಾನಗತಿಯಲ್ಲಿ ಓವರ್‌: ಭಾರತ ತಂಡಕ್ಕೆ ದಂಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ಸೋತ ಭಾರತಕ್ಕೆ ಮತ್ತೊಂದು ಶಾಕ್ ಎದುರಾಗಿದ್ದು, ನಿಗದಿತ ಸಮಯಕ್ಕಿಂತ ನಾಲ್ಕು ಓವರ್‌ಗಳಷ್ಟು ಕಡಿಮೆ ಮಾಡಿದ್ದ ಕಾರಣ ಓವರ್‌ಗೆ ಶೇಕಡಾ 20 ರಂತೆ ಒಟ್ಟು ಶೇಕಡಾ 80 ದಂಡ ವಿಧಿಸಲಾಗಿದೆ.
ಐಸಿಸಿಯ ಎಲೈಟ್‌ ಪ್ಯಾನೆಲ್‌ ಮ್ಯಾಚ್‌ ರೆಫರಿ ದಂಡದ ಮೊತ್ತವನ್ನು ಪ್ರಕಟಿಸಿದ್ದಾರೆ.
ಐಸಿಸಿಯ ಕೋಡ್‌ ಆಫ್‌ ಕಾಂಡೆಕ್ಟ್‌ನ ಆರ್ಟಿಕಲ್ 2.22 ರ ಪ್ರಕಾರ ನಿಗದಿಪಡಿಸಿರುವ ಸಮಯಕ್ಕಿಂತ ಹೆಚ್ಚು ಅವಧಿಯನ್ನು ತಂಡವೊಂದು ತೆಗೆದುಕೊಂಡರೆ ಆ ತಂಡದ ಆಟಗಾರರು, ಕೋಚ್‌ ಹಾಗೂ ಸಹಾಯಕ ಸಿಬ್ಬಂದಿಗೆ ಪಂದ್ಯದ ಶುಲ್ಕವನ್ನು ದಂಡವಾಗಿ ವಿಧಿಸಬಹುದು. ಆಟಗಾರರು ಒಪ್ಪಿಕೊಂಡು ಪಾವತಿಸಬೇಕು, ಇಲ್ಲವಾದರೆ ವಿಚಾರಣೆಗೆ ಹಾಜರಾಗಬೇಕು.
ಟೀಮ್ ಇಂಡಿಯಾದ ನಾಯಕ ರೋಹಿತ್‌ ಶರ್ಮ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಇದರ ಬಗ್ಗೆ ಹೆಚ್ಚಿನ ವಿಚಾರಣೆ ಅಗತ್ಯವಿಲ್ಲ ಎಂಬುದಾಗಿ ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!