July 23, 2026
Thursday, July 23, 2026
spot_img

ಇಂಗ್ಲೆಂಡ್‌ಗೆ ಮಂದಗತಿಯ ಓವರ್ ರೇಟ್ ಶಾಕ್: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ರೇಸ್‌ನಿಂದ ಔಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪುವ ಇಂಗ್ಲೆಂಡ್ ಕ್ರಿಕೆಟ್ ತಂಡದ ಕನಸು ಸಂಪೂರ್ಣ ಕಮರಿದೆ. ನ್ಯೂಜಿಲೆಂಡ್ ವಿರುದ್ಧ ಎದುರಿಸಿದ ಭಾರಿ ಸೋಲು ಹಾಗೂ ಐಸಿಸಿ (ICC) ವಿಧಿಸಿದ ಮಂದಗತಿಯ ಓವರ್ ರೇಟ್ ಪೆನಾಲ್ಟಿಯಿಂದಾಗಿ ಇಂಗ್ಲೆಂಡ್ ತಂಡ ಅಂಕ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದಿದೆ. ನಿಗದಿತ ಅವಧಿಯಲ್ಲಿ ಓವರ್‌ಗಳನ್ನು ಮುಗಿಸದ ಕಾರಣ ಐಸಿಸಿ ಬರೋಬ್ಬರಿ 12 ಅಂಕಗಳ ದಂಡ ವಿಧಿಸಿದ್ದು, ಒಟ್ಟಾರೆ ಸರಣಿಯಲ್ಲಿ 14 ಅಂಕಗಳನ್ನು ಕಳೆದುಕೊಂಡು ಇಂಗ್ಲೆಂಡ್ ಫೈನಲ್ ರೇಸ್‌ನಿಂದ ಹೊರಬಿದ್ದಿದೆ.

ಅಂಕ ಪಟ್ಟಿಯ ಲೆಕ್ಕಾಚಾರ ಹೀಗಿದೆ

ಪ್ರಸ್ತುತ ಡಬ್ಲ್ಯೂಟಿಸಿ ಅಂಕ ಪಟ್ಟಿಯಲ್ಲಿ ಇಂಗ್ಲೆಂಡ್ ಕೇವಲ 26.39% ಪಾಯಿಂಟ್ಸ್ ಶೇಕಡಾವಾರು (PCT) ಹೊಂದಿದೆ. ಇಂಗ್ಲೆಂಡ್ ತಂಡವು ತನ್ನ ಮುಂದಿನ ಎಲ್ಲಾ 9 ಪಂದ್ಯಗಳಲ್ಲಿ ಗೆದ್ದರೂ ಗರಿಷ್ಠ 57.94% PCT ಮಾತ್ರ ಗಳಿಸಲು ಸಾಧ್ಯ.

ಟಾಪ್-2 ರೇಸ್‌ನಿಂದ ಇಂಗ್ಲೆಂಡ್ ಔಟ್

ನಿಯಮಗಳ ಪ್ರಕಾರ, ಅಂಕ ಪಟ್ಟಿಯ ಅಗ್ರ ಎರಡು ತಂಡಗಳು ಮಾತ್ರ ಫೈನಲ್ ಆಡಲಿವೆ. ಸದ್ಯ ಆಸ್ಟ್ರೇಲಿಯಾ 87.50% ರೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಸೌತ್ ಆಫ್ರಿಕಾ 75.00% ರೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಹೀಗಾಗಿ, ಇಂಗ್ಲೆಂಡ್ ಮುಂದಿನ ಎಲ್ಲಾ ಪಂದ್ಯಗಳನ್ನು ಗೆದ್ದರೂ ಈ ಎರಡೂ ತಂಡಗಳನ್ನು ಹಿಂದಿಕ್ಕಿ ಟಾಪ್-2 ತಲುಪುವುದು ಅಸಾಧ್ಯವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !