September 28, 2026
Monday, September 28, 2026
spot_img

ಪಲ್ಯ, ಗ್ರೇವಿ & More 97 | ಕೇವಲ 15 ನಿಮಿಷದಲ್ಲಿ ಮಾಡುವ ಸುಟ್ಟ ಬದನೆಕಾಯಿ ಚಟ್ನಿ, ಒಮ್ಮೆ ಟ್ರೈ ಮಾಡಿ

ಅಡುಗೆ ಮನೆಯಲ್ಲಿ ಸುಡುವ ಬದನೆಕಾಯಿಯ ಘಮ ಹರಡಿದರೆ ಸಾಕು, ಹಸಿವು ದುಪ್ಪಟ್ಟಾಗುತ್ತದೆ! ಹಳ್ಳಿ ಶೈಲಿಯ ಅತ್ಯಂತ ಜನಪ್ರಿಯ ರೆಸಿಪಿಗಳಲ್ಲಿ ಒಂದಾದ ‘ಸುಟ್ಟ ಬದನೆಕಾಯಿ ಚಟ್ನಿ’ ತನ್ನ ವಿಶಿಷ್ಟವಾದ ಸ್ಮೋಕಿ ಫ್ಲೇವರ್ ನಿಂದಲೇ ಹೆಸರುವಾಸಿ. ಬದನೆಕಾಯಿಯನ್ನು ನೇರವಾಗಿ ಒಲೆಯ ಉರಿಯಲ್ಲಿ ಸುಟ್ಟು ಮಾಡುವುದರಿಂದ ಇದರ ರುಚಿ ಸಾಮಾನ್ಯ ಚಟ್ನಿಗಳಿಗಿಂತ ಸಂಪೂರ್ಣ ಭಿನ್ನ ಮತ್ತು ಅದ್ಭುತವಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು
ದೊಡ್ಡ ಗುಂಡು ಬದನೆಕಾಯಿ
ಹಸಿ ಮೆಣಸಿನಕಾಯಿ
ಬೆಳ್ಳುಳ್ಳಿ ಎಸಳು
ಸಣ್ಣಗೆ ಹೆಚ್ಚಿದ ಈರುಳ್ಳಿ
ಕೊತ್ತಂಬರಿ ಸೊಪ್ಪು
ಹುಣಿಸೇಹಣ್ಣಿನ ರಸ
ಅಡುಗೆ ಎಣ್ಣೆ
ಸಾಸಿವೆ ಮತ್ತು
ಕರಿಬೇವು
ಉಪ್ಪು

ಮಾಡುವ ವಿಧಾನ
ಮೊದಲು ಬದನೆಕಾಯಿಯನ್ನು ತೊಳೆದು, ಬಟ್ಟೆಯಿಂದ ಒರೆಸಿಕೊಳ್ಳಿ. ಅದಕ್ಕೆ ಸುತ್ತಲೂ ಸ್ವಲ್ಪ ಎಣ್ಣೆ ಸವರಿ. ಅಲ್ಲಲ್ಲಿ ಚಾಕುವಿನಿಂದ ಸಣ್ಣದಾಗಿ ಚುಚ್ಚಿ, ಅದರೊಳಗೆ ಬೆಳ್ಳುಳ್ಳಿ ಎಸಳು ಮತ್ತು ಹಸಿಮೆಣಸಿನಕಾಯಿಯನ್ನು ತೂರಿಸಿ ಗ್ಯಾಸ್ ಒಲೆಯ ಉರಿಯನ್ನು ಮಧ್ಯಮವಾಗಿಟ್ಟು, ಬದನೆಕಾಯಿಯನ್ನು ನೇರವಾಗಿ ಇಟ್ಟು ತಿರುಗಿಸುತ್ತಾ ಸುಟ್ಟುಕೊಳ್ಳಬೇಕು. ಹೊರಗಿನ ಸಿಪ್ಪೆ ಪೂರ್ತಿ ಕಪ್ಪಾಗುವವರೆಗೆ ಸುಡಬೇಕು. ಅದು ತಣ್ಣಗಾದ ನಂತರ, ಅದರ ಮೇಲಿನ ಕಪ್ಪು ಸಿಪ್ಪೆಯನ್ನು ಸಂಪೂರ್ಣವಾಗಿ ಸುಲಿದು ತೆಗೆಯಬೇಕು. ನಂತರ ಬದನೆಕಾಯಿಯ ತೊಟ್ಟನ್ನು ಕತ್ತರಿಸಿ, ಒಳಗಿನ ತಿರುಳನ್ನು ಒಂದು ಬೌಲ್‌ಗೆ ಹಾಕಿ ಚಮಚ ಅಥವಾ ಕೈಯಿಂದ ಚೆನ್ನಾಗಿ ಸ್ಮ್ಯಾಶ್ ಮಾಡಿ. ಬಳಿಕ ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹುಣಿಸೇಹಣ್ಣಿನ ರಸ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕೈಯಿಂದಲೇ ಕಲಸಬೇಕು. ನಂತರ ಸಣ್ಣ ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಜೀರಿಗೆ ಮತ್ತು ಕರಿಬೇವು ಹಾಕಿ ಸಿಡಿಸಿ. ಚಟ್ನಿಯ ಮೇಲೆ ಹಾಕಿ ಮಿಕ್ಸ್ ಮಾಡಿದರೆ, ಘಮಘಮಿಸುವ ಸುಟ್ಟ ಬದನೆಕಾಯಿ ಚಟ್ನಿ ಸವಿಯಲು ಸಿದ್ಧವಾಗುತ್ತದೆ. ಇದನ್ನು ಬಿಸಿ ರೊಟ್ಟಿ, ಮುದ್ದೆ ಅಥವಾ ಅನ್ನದ ಜೊತೆ ಸವಿಯಲು ಅದ್ಭುತವಾಗಿರುತ್ತದೆ.

Must Read