ಭಾರತೀಯ ಛಾಯಾಗ್ರಾಹಕನಿಗೆ ಒಲಿದ ಪ್ರತಿಷ್ಠಿತ ʼಪಿಂಕ್ ಲೇಡಿ ಫುಡ್ ಫೋಟೋಗ್ರಫಿʼ ಪ್ರಶಸ್ತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಾರತೀಯ ಛಾಯಾಗ್ರಾಹಕ ದೇಬ್‌ದತ್ತ ಚಕ್ರವರ್ತಿ ಅವರ ಛಾಯಾಚಿತ್ರವು 2022ರ ಪಿಂಕ್ ಲೇಡಿ ಫುಡ್ ಫೋಟೋಗ್ರಫಿ ಪ್ರಶಸ್ತಿಗೆ ಭಾಜನವಾಗಿದೆ.
ಕಾಶ್ಮೀರ ಪ್ರಾಂತ್ಯದ ಬೀದಿಬದಿಯ ಆಹಾರ ಮಾರುಕಟ್ಟೆಯಲ್ಲಿ ಕಬಾಬಿವಾಲನೊಬ್ಬ ತನ್ನ ಸುತ್ತಲೂ ಹಬ್ಬಿರುವ ದಟ್ಟವಾದ ಹೊಗೆಯ ನಡುವೆ ಕಬಾಬ್‌ ಬೇಯಿಸುವುದರಲ್ಲಿ ತಲ್ಲೀನಾಗಿರುವ ಕ್ಷಣವೊಂದರ ಅದ್ಭುತ ಚಿತ್ರ ದೇಬ್‌ದತ್ತ ಅವರಿಗೆ ಪ್ರತಿಷ್ಠಿತ ಪ್ರಶಸ್ತಿಯನ್ನು ಗಳಿಸಿಕೊಟ್ಟಿದೆ.
ಈ ಚಿತ್ರವನ್ನು ಕಾಶ್ಮೀರದ ಖಯ್ಯಾಮ್ ಚೌಕ್‌ನಲ್ಲಿ ತೆಗೆದುಕೊಳ್ಳಲಾಗಿದೆ. ಈ ಬೀದಿಯಲ್ಲಿ ವಾಜ್ವಾನ್ ಕಬಾಬ್‌ಗಳು ಮತ್ತು ಇತರ ಸಾಂಪ್ರದಾಯಿಕ ಆಹಾರಗಳನ್ನು ಆನಂದಿಸಲು ಜನರು ಹೆಚ್ಚಾಗಿ ಸೇರುತ್ತಾರೆ. ಇದ್ದಿಲು ಗ್ರಿಲ್‌ಗಳ ಮೇಲೆ ಬೇಯಿಸಿದ ಜನಪ್ರಿಯ ಕಾಶ್ಮೀರಿ ಆಹಾರಗಳು ಸುವಾಸನೆಯಿಂದ ಬೀದಿಗಳನ್ನು ತುಂಬುತ್ತವೆ. ಇಂತಹದ್ದೇ ಒಂದು ಅಂಗಡಿಯೊಳಕ್ಕೆ ಚಿಕನ್ ಕಬಾಬ್‌ ಹಿಡಿದು ಹೊಗೆಯಲ್ಲಿ ಮುಳುಗಿರುವ ವ್ಯಕ್ತಿಯನ್ನು ಸೆರೆಹಿಡಿದ ಚಿತ್ರಕ್ಕೆ ಮನ್ನಣೆ ಪ್ರಾಪ್ತವಾಗಿದೆ.
ಈ ವರ್ಷದ ಸ್ಪರ್ಧೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.
ಪ್ರಪಂಚದಾದ್ಯಂತದ ಸಾವಿರಾರು ಜನ ಈ ವರ್ಷದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅಂತಿಮ ಸುತ್ತು ಪ್ರವೇಶಿಸಿದ ದೇಬ್‌ ದತ್ತ ಚಕ್ರವರ್ತಿ ಪ್ರಶಸ್ತಿ ಪಡೆದಿದ್ದಾರೆ.
ಪಿಂಕ್ ಲೇಡಿ ಫುಡ್ ಫೋಟೋಗ್ರಾಫರ್ ಸ್ಪರ್ಧೆಯನ್ನು 2011 ರಲ್ಲಿ ಸ್ಥಾಪಿಸಲಾಯಿತು. ಪ್ರಪಂಚದಾದ್ಯಂತದ ಅತ್ಯುತ್ತಮ ಆಹಾರ ಛಾಯಾಗ್ರಹಣ ಮತ್ತು ವೀಡಿಯೊಗಳಿಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಬ್ರಿಸ್ಟಲ್‌ನಲ್ಲಿರುವ ರಾಯಲ್ ಫೋಟೋಗ್ರಾಫಿಕ್ ಸೊಸೈಟಿಯಲ್ಲಿ ನವೆಂಬರ್ 20 ರಿಂದ ಡಿಸೆಂಬರ್ 12 ರವರೆಗೆ ಈ ಚಿತ್ರಗಳ ಪ್ರದರ್ಶನ ನಡೆಯಲಿದೆ. ಫೈನಲಿಸ್ಟ್‌ಗಳಾದವರ ಎಲ್ಲಾ ಫೋಟೋಗಳನ್ನು ಪ್ರದರ್ಶಿಸಲಾಗುತ್ತದೆ. ಈ ಛಾಯಾಚಿತ್ರ ಪ್ರದರ್ಶನವು ಉಚಿತವಾಗಿರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!