ವಿಜಯ್‌ ಬಾಬು ಕಿರಿಕ್:‌ ಇನ್ನೊಂದು ಕೇಸ್‌ ಹಾಕಿದ ಕೇರಳ ಪೋಲೀಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಲಯಾಳಂನ ನಟ ಮತ್ತು ನಿರ್ಮಾಪಕ ʼವಿಜಯ್‌ ಬಾಬುʼ ಮೇಲೆ ಕೇರಳ ಪೋಲೀಸರು ಮತ್ತೊಂದು ಕೇಸ್‌ ಹಾಕಿದ್ದು ಎರಡೆರಡು ಕೇಸ್‌ ಬಿದ್ದು ನಟ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಲೈಂಗಿಕ ದೌರ್ಜನ್ಯದ ಆರೋಪವನ್ನು ಎದುರಿಸುತ್ತಿರುವ ವಿಜಯ್‌ ಅವರು ದೂರುದಾರರ ಗುರುತನ್ನು ಬಹಿರಂಗಪಡಿಸಿರುವುದಕ್ಕಾಗಿ ಅವರ ಮೇಲೆ ಇನ್ನೊಂದು ಕೇಸ್‌ ದಾಖಲಾಗಿದೆ.

ನಟಿಮಣಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಮಾಡಿರುವ ಆರೋಪದ ಮೇಲೆ ಅವರ ಮೇಲೆ ಪೋಲಿಸರು ಕೇಸ್‌ ದಾಖಲಿಸಿದ್ದರು. ಇದರಿಂದ ಕುಪಿತಗೊಂಡ ನಟ ಇದು ಸುಳ್ಳು ಆರೋಪವಾಗಿದ್ದು ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಫೇಸ್ಬುಕ್‌ ಲೈವ್‌ ನಲ್ಲಿ ಹೇಳಿದ್ದರು. ಆದರೆ ಈಗ ಅವರ ಮೇಲೆ ಎರಡೆರಡು ಆರೋಪಗಳು ದಾಖಲಾಗಿದ್ದು ನಟ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!