June 13, 2026
Saturday, June 13, 2026
spot_img

Snack | ಸಂಜೆ ಟೀ ಜೊತೆಗೆ ಸೂಪರ್ ಸ್ನ್ಯಾಕ್ ಬೇಕಾ?: ಸ್ಟ್ರೀಟ್ ಸ್ಟೈಲ್ ಮಸಾಲಾ ಕಾರ್ನ್ ಟ್ರೈ ಮಾಡಿ

ಬಾಯಲ್ಲಿ ನೀರೂರಿಸುವ ಖಾರ, ಹುಳಿ ಮತ್ತು ಬೆಣ್ಣೆಯ ರುಚಿ ಇರುವ ಸ್ಟ್ರೀಟ್ ಸ್ಟೈಲ್ ಮಸಾಲಾ ಕಾರ್ನ್ ಎಲ್ಲರಿಗೂ ಇಷ್ಟವಾಗುವ ಟೇಸ್ಟಿ ಸ್ನ್ಯಾಕ್. ಸಂಜೆ ಚಹಾ ಅಥವಾ ಮಳೆಯ ಸಮಯದಲ್ಲಿ ಇದನ್ನು ತಯಾರಿಸಿ ಸವಿದರೆ ಮಜಾ ಡಬಲ್. ಮನೆಯಲ್ಲೇ ಕೇವಲ 10 ನಿಮಿಷಗಳಲ್ಲಿ ಈ ರೆಸಿಪಿ ರೆಡಿ ಮಾಡಬಹುದು.

ಬೇಕಾಗುವ ಪದಾರ್ಥಗಳು:

ಸಿಹಿ ಜೋಳದ ಕಾಳುಗಳು – 1 ಕಪ್
ಬೆಣ್ಣೆ – 1 ಚಮಚ
ಚಾಟ್ ಮಸಾಲಾ – ಅರ್ಧ ಚಮಚ
ಖಾರದ ಪುಡಿ – ಅರ್ಧ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ನಿಂಬೆ ರಸ – 1 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ:

ಮೊದಲು ಜೋಳದ ಕಾಳುಗಳನ್ನು ನೀರಿನಲ್ಲಿ ಸ್ವಲ್ಪ ಉಪ್ಪು ಹಾಕಿ 5 ರಿಂದ 7 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ನೀರನ್ನು ಸಂಪೂರ್ಣವಾಗಿ ಸೋಸಿ ಪಕ್ಕಕ್ಕೆ ಇಡಿ.

ಈಗ ಬಾಣಲೆಯಲ್ಲಿ ಬೆಣ್ಣೆ ಹಾಕಿ ಕರಗಿದ ಬಳಿಕ ಬೇಯಿಸಿದ ಜೋಳವನ್ನು ಸೇರಿಸಿ ಒಂದು ನಿಮಿಷ ಚೆನ್ನಾಗಿ ಹುರಿಯಿರಿ. ಬಳಿಕ ಚಾಟ್ ಮಸಾಲಾ, ಖಾರದ ಪುಡಿ ಮತ್ತು ಉಪ್ಪು ಸೇರಿಸಿ ಮಿಶ್ರಣ ಮಾಡಿ.

ಕೊನೆಯಲ್ಲಿ ಗ್ಯಾಸ್ ಆಫ್ ಮಾಡಿ, ನಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಬೆರೆಸಿದರೆ ರುಚಿಯಾದ ಸ್ಟ್ರೀಟ್ ಸ್ಟೈಲ್ ಮಸಾಲಾ ಕಾರ್ನ್ ಸವಿಯಲು ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !