SNACKS | ಮಳೆ ಬರೋ ಟೈಮ್ ನಲ್ಲಿ ಟೀ ಜೊತೆ ರುಚಿರುಚಿಯಾಗಿ ತಯಾರಿಸಿ ಹಲಸಿನಕಾಯಿ ಬೋಂಡಾ

ಬೇಕಾಗುವ ಸಾಮಾಗ್ರಿಗಳು:

ಬೇಯಿಸಿದ ಹಲಸಿನಕಾಯಿ 1 ಕಪ್
ಅಕ್ಕಿ ಹಿಟ್ಟು 1/4 ಕಪ್
ಕಡಲೆಹಿಟ್ಟು 1/2 ಕಪ್
ಜೀರಿಗೆ 1 ಚಮಚ
ಅರಿಶಿಣಪುಡಿ 1/2 ಚಮಚ
ಈರುಳ್ಳಿ 1
ಖಾರದಪುಡಿ 1 ಚಮಚ
ಕೊತ್ತಂಬರಿ ಸೊಪ್ಪು 1/4 ಕಟ್ಟು
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ ಕರಿಯಲು ಬೇಕಾದಷ್ಟು

ಮಾಡುವ ವಿಧಾನ

ಮೊದಲಿಗೆ ಹಲಸಿನಕಾಯಿಯ ಸಿಪ್ಪೆ ತೆಗೆದು ಸಣ್ಣದಾಗಿ ಕತ್ತರಿಸಿ ಬೇಯಿಸಿಕೊಳ್ಳಬೇಕು. ನಂತರ ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ಹೆಚ್ಚಿಟ್ಟುಕೊಳ್ಳಬೇಕು. ನಂತರ ಒಂದು ಬೌಲ್‌ನಲ್ಲಿ ಬೇಯಿಸಿಕೊಂಡ ಹಲಸಿನಕಾಯಿಯನ್ನು ನುರಿಯಬೇಕು.
ನಂತರ ಅದಕ್ಕೆ ಕಡಲೆಹಿಟ್ಟು, ಅಕ್ಕಿ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಜೀರಿಗೆ, ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಖಾರದಪುಡಿ, ಉಪ್ಪು, ಅರಿಶಿಣ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಕಲಸಿದ ಮಿಶ್ರಣವನ್ನು ಉಂಡೆಯ ಗಾತ್ರದಲ್ಲಿ ಕಟ್ಟಿಕೊಳ್ಳಬೇಕು. ನಂತರ ಎಣ್ಣೆ ಕಾದ ಮೇಲೆ ಉಂಡೆಗಳನ್ನು ಹಾಕಿ ಕರಿದರೆ ರುಚಿಕರವಾದ ಹಲಸಿನಕಾಯಿ ಬೋಂಡಾ ಸವಿಯಲು ಸಿದ್ದ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!