September 28, 2026
Monday, September 28, 2026
spot_img

SNACKS |‌ ಹಾಲಿನ ಪುಡಿಯಿಂದ ಇಷ್ಟೊಂದು ರುಚಿಯಾದ ಪ್ಯಾನ್‌ಕೇಕ್ ಮಾಡಬಹುದೇ? ಇಲ್ಲಿದೆ ಮ್ಯಾಜಿಕ್ ರೆಸಿಪಿ!

ಸಂಜೆ ಸಮಯದ ಹಸಿವಿಗೆ ಅಥವಾ ಮಕ್ಕಳಿಗೆ ದಿಢೀರ್ ಎಂದು ಏನಾದರೂ ಸ್ಪೆಷಲ್ ತಿಂಡಿ ಮಾಡಿಕೊಡಬೇಕು ಎಂದಾಗ ನಮ್ಮ ನೆನಪಿಗೆ ಬರುವುದು ಬೇಕರಿ ತಿಂಡಿಗಳು. ಆದರೆ, ಪ್ರತಿಸಾರಿಯೂ ಹೊರಗಿನ ತಿಂಡಿ ತರುವ ಬದಲು ಮನೆಯಲ್ಲೇ ಇರುವ ಪದಾರ್ಥಗಳಿಂದ ಕೇವಲ 10 ನಿಮಿಷಗಳಲ್ಲಿ ಅದ್ಭುತವಾದ ಪ್ಯಾನ್‌ಕೇಕ್ ತಯಾರಿಸಬಹುದು

ಬೇಕಾಗುವ ಸಾಮಗ್ರಿಗಳು

ಗೋಧಿ ಹಿಟ್ಟು ಅಥವಾ ಮೈದಾ

ಹಾಲಿನ ಪುಡಿ

ಸಕ್ಕರೆ ಪುಡಿ

ಅಡಿಗೆ ಸೋಡಾ

ಹಾಲು ಅಥವಾ ನೀರು

ತುಪ್ಪ ಅಥವಾ ಬೆಣ್ಣೆ

 ಏಲಕ್ಕಿ ಪುಡಿ ಅಥವಾ ವೆನಿಲ್ಲಾ ಎಸೆನ್ಸ್

ಮಾಡುವ ವಿಧಾನ

ಒಂದು ದೊಡ್ಡ ಪಾತ್ರೆಯಲ್ಲಿ ಗೋಧಿ ಹಿಟ್ಟು ಅಥವಾ ಮೈದಾ, ಹಾಲಿನ ಪುಡಿ, ಸಕ್ಕರೆ ಪುಡಿ ಮತ್ತು ಅಡಿಗೆ ಸೋಡಾವನ್ನು ಹಾ‌ಕಿ, ಚೆನ್ನಾಗಿ ಒಣ ಮಿಶ್ರಣ ಮಾಡಬೇಕು. ಈ ಒಣ ಮಿಶ್ರಣಕ್ಕೆ ಏಲಕ್ಕಿ ಪುಡಿ ಅಥವಾ ವೆನಿಲ್ಲಾ ಎಸೆನ್ಸ್ ಸೇರಿಸಿ. ನಂತರ ಸ್ವಲ್ಪ ಸ್ವಲ್ಪವೇ ಹಾಲು ಅಥವಾ ನೀರನ್ನು ಹಾಕುತ್ತಾ ಗಂಟಿಲ್ಲದಂತೆ ಕಲಸಿಕೊಳ್ಳಬೇಕು. ಹಿಟ್ಟು ದೋಸೆ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿರಬೇಕು.

ನಂತರ ಗ್ಯಾಸ್ ಮೇಲೆ ಒಂದು ನಾನ್-ಸ್ಟಿಕ್ ತವಾವನ್ನು ಬಿಸಿ ಮಾಡಿ. ಅದಕ್ಕೆ ಸ್ವಲ್ಪ ತುಪ್ಪ ಅಥವಾ ಬೆಣ್ಣೆಯನ್ನು ಸವರಿ. ತವಾ ಬಿಸಿಯಾದಾಗ, ಒಂದು ಸೌಟು ಹಿಟ್ಟನ್ನು ತೆಗೆದುಕೊಂಡು ತವದ ಮಧ್ಯದಲ್ಲಿ ಹಾಕಿ. ಇದನ್ನು ದೋಸೆಯಂತೆ ಹರಡಬಾರದು, ತಾನಾಗಿಯೇ ಸ್ವಲ್ಪ ಹರಡಲು ಬಿಡಬೇಕು. ಕಡಿಮೆ ಉರಿಯಲ್ಲಿ ಪ್ಯಾನ್‌ಕೇಕ್ ಬೇಯಿಸಿ. ಮೇಲ್ಭಾಗದಲ್ಲಿ ಸಣ್ಣ ರಂಧ್ರಗಳು ಕಾಣಿಸಿಕೊಂಡಾಗ, ಅದನ್ನು ಇನ್ನೊಂದು ಬದಿಗೆ ತಿರುಗಿಸಿ ಹಾಕಿ. ಎರಡು ಕಡೆ ಹೊಂಬಣ್ಣ ಬರುವವರೆಗೆ ಬೇಯಿಸಿದರೆ ಬಿಸಿಬಿಸಿ ಮಿಲ್ಕ್ ಪೌಡರ್ ಪ್ಯಾನ್‌ಕೇಕ್ ಸಿದ್ಧ.

Must Read