August 24, 2026
Monday, August 24, 2026
spot_img

Snacks | ಸಂಜೆಯ ಟೀ ಜೊತೆ ಸವಿಯಲು ಗರಿಗರಿಯಾದ ಮ್ಯಾಗಿ ರೋಲ್ ರೆಡಿ ಇದೆ

ಮನೆಯಲ್ಲೇ ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ರುಚಿಕರವಾದ ಸ್ನ್ಯಾಕ್ಸ್‌ಗಳಲ್ಲಿ ಮ್ಯಾಗಿ ರೋಲ್ ಕೂಡ ಒಂದು. ಮಸಾಲೆಯುಕ್ತ ಮ್ಯಾಗಿ ನೂಡಲ್ಸ್ ಹಾಗೂ ತಾಜಾ ತರಕಾರಿಗಳ ಸಂಯೋಜನೆಯಿಂದ ತಯಾರಾಗುವ ಈ ರೋಲ್ ಸಂಜೆ ಟೀ ಅಥವಾ ಕಾಫಿಯೊಂದಿಗೆ ಇದನ್ನು ಸವಿಯಬಹುದು.

ಬೇಕಾಗುವ ಸಾಮಗ್ರಿಗಳು
ಮ್ಯಾಗಿ ನೂಡಲ್ಸ್ – 1 ಪ್ಯಾಕೆಟ್
ಮೈದಾ ಅಥವಾ ಗೋಧಿ ಹಿಟ್ಟು – 1 ಕಪ್
ಈರುಳ್ಳಿ – 1 (ಸಣ್ಣದಾಗಿ ಹೆಚ್ಚಿದ್ದು)
ಕ್ಯಾರೆಟ್ – ¼ ಕಪ್ (ಸಣ್ಣದಾಗಿ ಹೆಚ್ಚಿದ್ದು)
ಕ್ಯಾಪ್ಸಿಕಂ – ¼ ಕಪ್ (ಸಣ್ಣದಾಗಿ ಹೆಚ್ಚಿದ್ದು)
ಹಸಿರು ಮೆಣಸಿನಕಾಯಿ – 1 (ಐಚ್ಛಿಕ)
ಎಣ್ಣೆ – 2 ರಿಂದ 3 ಚಮಚ
ಮ್ಯಾಗಿ ಮಸಾಲಾ – 1 ಪ್ಯಾಕೆಟ್
ಉಪ್ಪು – ರುಚಿಗೆ ತಕ್ಕಷ್ಟು
ಟೊಮೆಟೊ ಸಾಸ್ – ಅಗತ್ಯಕ್ಕೆ ತಕ್ಕಷ್ಟು

ತಯಾರಿಸುವ ವಿಧಾನ

ಒಂದು ಪಾತ್ರೆಯಲ್ಲಿ ಹಿಟ್ಟು, ಚಿಟಿಕೆ ಉಪ್ಪು ಹಾಗೂ ಸ್ವಲ್ಪ ಎಣ್ಣೆ ಹಾಕಿ ನೀರು ಸೇರಿಸಿ ಮೃದುವಾಗಿ ಕಲಸಿ. ಸುಮಾರು 15 ನಿಮಿಷಗಳ ಕಾಲ ಮುಚ್ಚಿಟ್ಟು ಬಿಡಿ.

ಮ್ಯಾಗಿ ತಯಾರಿ

ನೀರನ್ನು ಕುದಿಸಿ ಮ್ಯಾಗಿ ಮತ್ತು ಮಸಾಲೆ ಸೇರಿಸಿ ಬೇಯಿಸಿಕೊಳ್ಳಿ. ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಈರುಳ್ಳಿ, ಕ್ಯಾರೆಟ್, ಕ್ಯಾಪ್ಸಿಕಂ ಮತ್ತು ಹಸಿರು ಮೆಣಸಿನಕಾಯಿ ಹಾಕಿ ಹುರಿಯಿರಿ. ಬಳಿಕ ಬೇಯಿಸಿದ ಮ್ಯಾಗಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ರೋಲ್ ತಯಾರಿಸುವ ವಿಧಾನ

ಹಿಟ್ಟಿನಿಂದ ತೆಳುವಾದ ಚಪಾತಿ ಲಟ್ಟಿಸಿ ಎರಡೂ ಬದಿಗಳಲ್ಲಿ ಬೇಯಿಸಿ. ಅದರ ಮಧ್ಯಭಾಗದಲ್ಲಿ ಮ್ಯಾಗಿ ಮಿಶ್ರಣವನ್ನು ಹಾಕಿ, ಮೇಲಿಂದ ಟೊಮೆಟೊ ಸಾಸ್ ಸೇರಿಸಿ ಬಿಗಿಯಾಗಿ ರೋಲ್ ಮಾಡಿ.

ಬಿಸಿ ಬಿಸಿಯಾದ ಮ್ಯಾಗಿ ರೋಲ್‌ಗಳನ್ನು ಟೊಮೆಟೊ ಸಾಸ್ ಅಥವಾ ಹಸಿರು ಚಟ್ನಿಯೊಂದಿಗೆ ಸವಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !