September 27, 2026
Sunday, September 27, 2026
spot_img

SNACKS | ಕ್ರಿಸ್ಪಿ ವೆಜಿಟೇಬಲ್ ಕಟ್ಲೆಟ್: ಸಂಜೆಯ ಚಹಾಕ್ಕೆ ಪರ್ಫೆಕ್ಟ್ ಸ್ನ್ಯಾಕ್ಸ್

ಸಂಜೆ ವೇಳೆ ಆಫೀಸ್‌ನಿಂದ ಬಂದಾಗ ಅಥವಾ ಮಕ್ಕಳು ಶಾಲೆಯಿಂದ ಮನೆಗೆ ಮರಳಿದಾಗ ಹೊಟ್ಟೆ ಚುರುಗುಟ್ಟುವುದು ಸಹಜ. ಅಂತಹ ಸಮಯದಲ್ಲಿ ಬಿಸಿಬಿಸಿ ಚಹಾ ಅಥವಾ ಕಾಫಿಯೊಂದಿಗೆ ತಿನ್ನಲು ಗರಿಗರಿಯಾದ ತಿಂಡಿ ಇದ್ದರೆ ಸಂಜೆಯ ಮೂಡ್ ಮತ್ತಷ್ಟು ಚಿಲ್‌ ಆಗುತ್ತದೆ. ಜಂಕ್ ಫುಡ್‌ಗಳ ಬದಲಿಗೆ ಮನೆಯಲ್ಲೇ ಆರೋಗ್ಯಕರ ಹಾಗೂ ರುಚಿಕರವಾದ ಸ್ನ್ಯಾಕ್ಸ್ ಮಾಡಲು ಬಯಸಿದರೆ, ಈ ಕ್ರಿಸ್ಪಿ ವೆಜಿಟೇಬಲ್ ಕಟ್ಲೆಟ್ ಬೆಸ್ಟ್‌ ಚಾಯ್ಸ್.

ಬೇಕಾಗುವ ಸಾಮಗ್ರಿಗಳು

ಆಲೂಗಡ್ಡೆ

ಕ್ಯಾರೆಟ್

ಬೀನ್ಸ್

ಹಸಿ ಬಟಾಣಿ

ಹಸಿಮೆಣಸಿನಕಾಯಿ

ಶುಂಠಿ-ಬೆಳ್ಳುಳ್ಳಿ ಪೇಸ್ಟ್

ಖಾರದ ಪುಡಿ

ಗರಂ ಮಸಾಲಾ ಪುಡಿ

ಚಾಟ್ ಮಸಾಲಾ

ಕೊತ್ತಂಬರಿ ಸೊಪ್ಪು

ಮೈದಾ ಅಥವಾ ಕಾರ್ನ್ ಫ್ಲೋರ್

ಬ್ರೆಡ್ ಪುಡಿ ಅಥವಾ ರವೆ:

ಎಣ್ಣೆ

ಉಪ್ಪು

ಮಾಡುವ ವಿಧಾನ

ಒಂದು ದೊಡ್ಡ ಪಾತ್ರೆಯಲ್ಲಿ ಬೇಯಿಸಿದ ಆಲೂಗಡ್ಡೆ ಮತ್ತು ಇತರ ತರಕಾರಿಗಳನ್ನುಹಾಕಿ ಚೆನ್ನಾಗಿ ಮ್ಯಾಶ್ ಮಾಡಿ. ತರಕಾರಿಗೆ ಹಸಿಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಗರಂ ಮಸಾಲಾ, ಚಾಟ್ ಮಸಾಲಾ, ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಗಟ್ಟಿಯಾಗಿ ಕಲಸಿಕೊಳ್ಳಬೇಕು. ಕಲಸಿದ ಮಿಶ್ರಣದಿಂದ ಸಣ್ಣ ಉಂಡೆಗಳನ್ನು ತೆಗೆದುಕೊಂಡು, ನಿಮಗೆ ಇಷ್ಟವಾದ ಆಕಾರಕ್ಕೆ ತಟ್ಟಿಟ್ಟುಕೊಂಡು. ಒಂದು ಸಣ್ಣ ಬೌಲ್‌ನಲ್ಲಿ ಮೈದಾ ಅಥವಾ ಕಾರ್ನ್ ಫ್ಲೋರ್ ಹಿಟ್ಟಿಗೆ 3-4 ಚಮಚ ನೀರು ಹಾಕಿ, ಗಂಟಿಲ್ಲದಂತೆ ತೆಳುವಾಗಿ ಸಿದ್ಧಪಡಿಸಿ. ತಟ್ಟಿಟ್ಟ ಕಟ್ಲೆಟ್‌ಗಳನ್ನು ಮೊದಲು ಮೈದಾ ದ್ರಾವಣದಲ್ಲಿ ಅದ್ದಿ, ತಕ್ಷಣವೇ ಬ್ರೆಡ್ ಪುಡಿ ಅಥವಾ ರವೆಯ ಮೇಲೆ ಹೊರಳಿಸಿ, ಸುತ್ತಲೂ ಚೆನ್ನಾಗಿ ಅಂಟುವಂತೆ ಮಾಡಿ. ತವಾಕ್ಕೆ 2-3 ಚಮಚ ಎಣ್ಣೆ ಹಾಕಿ ಕಾಯಿಸಿ. ಕಟ್ಲೆಟ್‌ಗಳನ್ನು ತವದ ಮೇಲಿಟ್ಟು, ಮಧ್ಯಮ ಉರಿಯಲ್ಲಿ ಎರಡೂ ಬದಿ ಹೊಂಬಣ್ಣ ಹಾಗೂ ಗರಿಗರಿಯಾಗುವವರೆಗೆ ಬೇಯಿಸಿದರೆ, ಬಿಸಿಬಿಸಿಯಾದ ವೆಜಿಟೇಬಲ್ ಕಟ್ಲೆಟ್ ಸಿದ್ಧ.

Must Read