August 10, 2026
Monday, August 10, 2026
spot_img

SNACKS| ಆಲೂಗಡ್ಡೆ ಚಿಪ್ಸ್ ಬಿಟ್ಟುಬಿಡಿ; ಆರೋಗ್ಯಕರ ಸಿಹಿ ಗೆಣಸಿನ ಚಿಪ್ಸ್ ಮಾಡಿ ನೋಡಿ!

ಸಂಜೆ ಚಹಾ ಜತೆ ಕುರುಕಲು ತಿಂಡಿ ತಿನ್ನುವುದು ಎಲ್ಲರಿಗೂ ಇಷ್ಟ. ಆದರೆ ಪ್ರತಿದಿನ ಆಲೂಗಡ್ಡೆ ಚಿಪ್ಸ್ ಅಥವಾ ಬೇಕರಿ ತಿಂಡಿಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದಕ್ಕೆ ಉತ್ತಮ ಪರ್ಯಾಯವೇ ಸಿಹಿ ಗೆಣಸಿನ ಚಿಪ್ಸ್. ಇದು ಕೇವಲ ರುಚಿಯಷ್ಟೇ ಅಲ್ಲ, ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನೂ ನೀಡುತ್ತದೆ. ಮನೆಯಲ್ಲೇ ಅತ್ಯಂತ ಸುಲಭವಾಗಿ ಮತ್ತು ಗರಿಗರಿಯಾಗಿ ಈ ಹೆಲ್ದೀ ಚಿಪ್ಸ್ ಮಾಡಬಹುದು.

ಬೇಕಾಗುವ ಸಾಮಗ್ರಿಗಳು

ಸಿಹಿ ಗೆಣಸು

ಅಚ್ಚಖಾರದ ಪುಡಿ

ಚಾಟ್ ಮಸಾಲಾ

ಉಪ್ಪು

ಎಣ್ಣೆ

ಮಾಡುವ ವಿಧಾನ:

ಮೊದಲು ಸಿಹಿ ಗೆಣಸನ್ನು ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು. ನಂತರ ಸ್ಲೈಸರ್ ಬಳಸಿ ತೆಳುವಾದ ಚೂರುಗಳಾಗಿ ಕತ್ತರಿಸಿಕೊಳ್ಳಬೇಕು. ನಂತರ ಕತ್ತರಿಸಿದ ತುಂಡುಗಳನ್ನು ಒಂದು ಹತ್ತಿ ಬಟ್ಟೆ ಅಥವಾ ಟಿಶ್ಯೂ ಪೇಪರ್ ಮೇಲೆ ಹರಡಿ, ಅವುಗಳಲ್ಲಿರುವ ತೇವಾಂಶವನ್ನು ಸಂಪೂರ್ಣವಾಗಿ ಒಣಗಿಸಿಬೇಕು. ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಮಧ್ಯಮ ಉರಿಯಲ್ಲಿ ಕಾಯಿಸಿ. ಎಣ್ಣೆ ಕಾದ ನಂತರ ಗೆಣಸಿನ ತುಂಡುಗಳನ್ನು ಹಾಕಿ. ಉರಿಯನ್ನು ಮಧ್ಯಮದಿಂದ ಕಡಿಮೆಗೆ ಇಟ್ಟುಕೊಂಡು, ಚಿಪ್ಸ್ ಎರಡೂ ಕಡೆ ಗರಿಗರಿಯಾಗುವವರೆಗೆ ಮತ್ತು ಹೊಂಬಣ್ಣಕ್ಕೆ ಬರುವವರೆಗೆ ಕರಿಯಿರಿ. ಎಣ್ಣೆಯಿಂದ ತೆಗೆದ ತಕ್ಷಣ ಬಿಸಿ ಇರುವಾಗಲೇ ಅದಕ್ಕೆ ಉಪ್ಪು, ಖಾರದ ಪುಡಿ ಮತ್ತು ಚಾಟ್ ಮಸಾಲಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಗರಿಗರಿಯಾದ ಸಿಹಿ ಗೆಣಸನ ಚಿಪ್ಸ್‌ ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !