September 27, 2026
Sunday, September 27, 2026
spot_img

SNACKS | ಡಯಟ್ ಮಾಡುವವರಿಗಾಗಿ ಗಿಲ್ಟ್-ಫ್ರೀ, ಕ್ರಿಸ್ಪಿ ಮಸಾಲಾ ಪಪ್ಪಡ್ ಇಲ್ಲಿದೆ!

ಸಂಜೆಯ ಹಸಿವಿಗೆ ಬಜ್ಜಿ, ಬೋಂಡಾ ತಿಂದು ತೂಕ ಹೆಚ್ಚಿಸಿಕೊಳ್ಳುವ ಭಯವೇ? ಚಿಂತೆ ಬೇಡ. ಎಣ್ಣೆಯಿಲ್ಲದೆ ಕೇವಲ 5 ನಿಮಿಷಗಳಲ್ಲಿ ತಯಾರಿಸಬಹುದಾದ ಗಿಲ್ಟ್-ಫ್ರೀ ಮತ್ತು ಆರೋಗ್ಯಕರ ಸ್ನ್ಯಾಕ್ ರೆಸಿಪಿ ಇಲ್ಲಿದೆ. ಈ ‘ಮಸಾಲಾ ಪಪ್ಪಡ್’. ಕಡಿಮೆ ಕ್ಯಾಲೋರಿ ಹಾಗೂ ಹೆಚ್ಚು ರುಚಿ ಹೊಂದಿರುವ ಈ ಚಟಪಟಾ ಸ್ನ್ಯಾಕ್ ಅನ್ನು ನಿಮ್ಮ ಡಯಟ್ ಲಿಸ್ಟ್‌ಗೆ ಸೇರಿಸಿ.

ಬೇಕಾಗುವ ಸಾಮಗ್ರಿಗಳು

ಉದ್ದಿನ ಹಪ್ಪಳ

ಈರುಳ್ಳಿ

ಟೊಮೆಟೊ

ಕೊತ್ತಂಬರಿ ಸೊಪ್ಪು

ಖಾರದ ಪುಡಿ

ಚಾಟ್ ಮಸಾಲಾ

ನಿಂಬೆ ರಸ

ಖಾರಾ ಸೇವು ಅಥವಾ ಬೂಂದಿ

ಉಪ್ಪು

ಮಾಡುವ ವಿಧಾನ

 ಮೊದಲು ಹಪ್ಪಳವನ್ನು ಎಣ್ಣೆಯಲ್ಲಿ ಕರಿಯಿರಿ ಅಥವಾ ಗ್ಯಾಸ್ ಉರಿಯಲ್ಲಿ ನೇರವಾಗಿ ಸುಟ್ಟುಕೊಳ್ಳಬೇಕು. ಡಯಟ್ ಮಾಡುವವರಿಗೆ ಸುಟ್ಟ ಹಪ್ಪಳ ಉತ್ತಮ. ನಂತರ ಒಂದು ಬೌಲ್‌ನಲ್ಲಿ ಹೆಚ್ಚಿದ ಈರುಳ್ಳಿ, ಟೊಮೆಟೊ ಮತ್ತು ಕೊತ್ತಂಬರಿ ಸೊಪ್ಪನ್ನು ಮಿಕ್ಸ್ ಮಾಡಿ. ಅದೇ ಮಿಶ್ರಣಕ್ಕೆ ಖಾರದ ಪುಡಿ, ಚಾಟ್ ಮಸಾಲಾ, ಸ್ವಲ್ಪ ಉಪ್ಪು ಮತ್ತು ನಿಂಬೆ ರಸ ಸೇರಿಸಿ ಚೆನ್ನಾಗಿ ಕೈಯಾಡಿಸಿ. ತಯಾರಾದ ಹಪ್ಪಳವನ್ನು ಒಂದು ಪ್ಲೇಟ್‌ನಲ್ಲಿಟ್ಟು, ಅದರ ಮೇಲೆ ಈ ಈರುಳ್ಳಿ-ಟೊಮೆಟೊ ಮಿಶ್ರಣವನ್ನು ಸಮನಾಗಿ ಹರಡಿ. ಕೊನೆಯದಾಗಿ ಮೇಲಿಂದ ಗರಿಗರಿಯಾದ ಖಾರಾ ಸೇವು ಅಥವಾ ಬೂಂದಿ ಉದುರಿಸಿದರೆ ಮಸಾಲಾ ಹಪ್ಪಳ ಅಥವಾ ಪಪ್ಪಡ್ ಸವಿಯಲು ಸಿದ್ಧ.

Must Read