SNACKS | ಟೀ ಟೈಮ್ ನಲ್ಲಿ ಬಿಸ್ಕೆಟ್ ಇದ್ದರೆ ಮಜಾನೇ ಬೇರೆ, ಹಾಗಿದ್ರೆ ಮನೆಯಲ್ಲೇ ಟ್ರೈ ಮಾಡಿ Wheat Biscuits

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಕ್ಕಳಿಗೆ ಬಿಸ್ಕೆಟ್ ಅಂದ್ರೆ ಬಹಳ ಇಷ್ಟವಿರುತ್ತದೆ. ಹೊರಗಡೆಯಿಂದ ಬಿಸ್ಕೆಟ್ ತಂದು ಕೊಡುವ ಬದಲು. ಮನೆಯಲ್ಲಿ ಮಾಡಿದ್ದು ಕೊಟ್ಟರೆ ಅದು ಉತ್ತಮ ರುಚಿಯನ್ನು ಮಾತ್ರವಲ್ಲದೆ ಆರೋಗ್ಯಕರವೂ ಆಗಿದೆ.

Whole Wheat Biscuits Recipe

ಬೇಕಾಗುವ ಸಾಮಾಗ್ರಿಗಳು:

1 ಕಪ್- ಗೋಧಿ ಹಿಟ್ಟು
14 ಟೀ ಸ್ಪೂನ್-ಏಲಕ್ಕಿ ಪುಡಿ
ಚಿಟಿಕೆ-ಜಾಯಿಕಾಯಿ ಪುಡಿ
ಚಿಟಿಕೆ-ಉಪ್ಪು
5 ಟೇಬಲ್ ಸ್ಪೂನ್ ತುಪ್ಪ
¾ ಕಪ್- ಸಕ್ಕರೆ
4 ಟೇಬಲ್ ಸ್ಪೂನ್-ಹಾಲು

Whole Wheat Biscuits - Taste of the South Magazine

ಮಾಡುವ ವಿಧಾನ:

ಒಂದು ಬೌಲ್ ಗೆ ಗೋಧಿ ಹಿಟ್ಟು, ಉಪ್ಪು, ಏಲಕ್ಕಿ ಪುಡಿ, ಜಾಯಿಕಾಯಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಒಂದು ಬೌಲ್ ಗೆ ತುಪ್ಪ, ಹಾಗೂ ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

ಇದೀಗ ಈ ಮಿಶ್ರಣವನ್ನು ಗೋಧಿಹಿಟ್ಟಿನ ಮಿಶ್ರಣಕ್ಕೆ ಸೇರಿಸಿ ನಂತರ ಹಾಲು ಹಾಕಿ ಚೆನ್ನಾಗಿ ನಾದಿಕೊಳ್ಳಿ. ನಂತರ ಇದನ್ನು ತುಸು ದಪ್ಪಗೆ ಲಟ್ಟಿಸಿಕೊಂಡು ನಂತರ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ.

ಇದನ್ನು ಬೇಕಿಂಗ್ ಟ್ರೇ ಯಲ್ಲಿ ಇಟ್ಟು ಒವೆನ್ ನಲ್ಲಿ ಅಥವಾ ಬೇರೆ ಪಾತ್ರೆಯನ್ನು ಬಳಸಿ 20 ನಿಮಿಷಗಳ ಕಾಲ ಬೇಕ್ ಮಾಡಿಕೊಳ್ಳಿ. ಇದು ತಣ್ಣಗಾದ ಮೇಲೆ ಒಂದು ಡಬ್ಬದಲ್ಲಿ ತುಂಬಿಸಿಡಿ. ಟೀ ಟೈಮ್ ನಲ್ಲಿ ಮನೆಮಂದಿ ಜೊತೆ ಕೂತು ಸವಿಯಲು ಬಿಸ್ಕೆಟ್ ಸಿದ್ದ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!