ಸಂಜೆ ಶಾಲೆಯಿಂದ ಬಂದ ತಕ್ಷಣ ಮಕ್ಕಳು ಏನಾದರೂ ಟೇಸ್ಟಿ ಸ್ನ್ಯಾಕ್ಸ್ ಕೇಳುತ್ತಿದ್ದಾರಾ? ಹಾಗಾದರೆ ಹೊರಗಿನ ಜಂಕ್ ಫುಡ್ ಬಿಟ್ಟು, ಕೇವಲ 5 ನಿಮಿಷದಲ್ಲಿ ಸೂಪರ್ ಕ್ರಂಚಿ ಚೀಸ್ ಪಾಪ್‌ಕಾರ್ನ್ ಮನೆಯಲ್ಲೇ ಮಾಡಿಕೊಡಿ. ಈ ಇನ್‌ಸ್ಟಂಟ್ ರೆಸಿಪಿ ಮಕ್ಕಳಷ್ಟೇ ಅಲ್ಲ, ಮನೆಯ ದೊಡ್ಡವರಿಗೂ ಖಂಡಿತ ಇಷ್ಟವಾಗುತ್ತದೆ.
ಬೇಕಾಗುವ ಸಾಮಗ್ರಿಗಳು:
ಪಾಪ್‌ಕಾರ್ನ್
ಬೆಣ್ಣೆ ಅಥವಾ ಎಣ್ಣೆ
ಚೀಸ್ ಪೌಡರ್
ಉಪ್ಪು
ಅಚ್ಚಖಾರದ ಪುಡಿ
ಮಾಡುವ ವಿಧಾನ
ದಪ್ಪ ತಳದ ಪಾತ್ರೆ ಅಥವಾ ಕುಕ್ಕರ್‌ಗೆ ಎಣ್ಣೆ/ಬೆಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ 3-4ಮೆಕ್ಕೆಜೋಳದ ಕಾಳುಗಳನ್ನು ಹಾಕಿ ಮುಚ್ಚಿ. ಅವು ಸಿಡಿಯಲು ಶುರುವಾದಾಗ ಉಳಿದ ಕಾಳುಗಳನ್ನು ಹಾಕಿ. ಪಾತ್ರೆಯನ್ನು ಪೂರ್ತಿ ಮುಚ್ಚದೆ ಸ್ವಲ್ಪ ಗ್ಯಾಪ್ ಬಿಟ್ಟು, ಎಲ್ಲ ಕಾಳುಗಳು ಸಿಡಿದ ನಂತರ ಉರಿಯನ್ನು ಆಫ್ ಮಾಡಿ. ಪಾಪ್‌ಕಾರ್ನ್ ಇನ್ನು ಬಿಸಿಯಾಗಿರುವಾಗಲೇ ಅದರ ಮೇಲೆ ಚೀಸ್ ಪೌಡರ್, ಉಪ್ಪು ಮತ್ತು ಖಾರದ ಪುಡಿ ಉದುರಿಸಿ. ಪಾತ್ರೆಯನ್ನು ಮುಚ್ಚಿ, ಮಸಾಲೆ ಎಲ್ಲಾ ಕಡೆ ಸಮನಾಗಿ ಹರಡುವಂತೆ ಚೆನ್ನಾಗಿ ಶೇಕ್ ಮಾಡಿದರೆ ಗ ಬಿಸಿಬಿಸಿಯಾದ ಮತ್ತು ಕ್ರಂಚಿಯಾದ ಚೀಸ್ ಪಾಪ್‌ಕಾರ್ನ್ ಸವಿಯಲು ಸಿದ್ಧ!



