July 3, 2026
Friday, July 3, 2026
spot_img

SNACKS| ಕಡಿಮೆ ಎಣ್ಣೆ, ಹೆಚ್ಚು ಪ್ರೊಟೀನ್: ಇಲ್ಲಿದೆ ಹೆಲ್ತಿ ಅಂಡ್ ಟೇಸ್ಟಿ ಪನೀರ್ ಸ್ಯಾಂಡ್‌ವಿಚ್ ರೆಸಿಪಿ

ಸಂಜೆ ಹೊತ್ತಿನಲ್ಲಿ ಏನಾದರೂ ರುಚಿಯಾಗಿ, ಹಾಗೆಯೇ ಹೊಟ್ಟೆ ತುಂಬುವಂತಹ ಸ್ನ್ಯಾಕ್ಸ್ ತಿನ್ನಬೇಕು ಅನ್ನಿಸುವುದು ಸಹಜ. ಇಂತಹ ಸಮಯದಲ್ಲಿ ಕೇವಲ 10-15 ನಿಮಿಷಗಳಲ್ಲಿ ಮಾಡಬಹುದಾದ ಬೆಸ್ಟ್ ಇನ್‌ಸ್ಟಂಟ್ ಸ್ನ್ಯಾಕ್ಸ್ ಎಂದರೆ ಈ ಕಡಲೆ ಪನೀರ್ ಸ್ಯಾಂಡ್‌ವಿಚ್.

ಬೇಕಾಗುವ ಸಾಮಗ್ರಿಗಳು

ಬೇಯಿಸಿದ ಕಡಲೆ

ತುರಿದ ಪನೀರ್

ಬ್ರೆಡ್ ತುಂಡುಗಳು

ಈರುಳ್ಳಿ,

ಟೊಮೆಟೊ

ಕೊತ್ತಂಬರಿ ಸೊಪ್ಪು

ಚಾಟ್ ಮಸಾಲಾ

ಅಚ್ಚಖಾರದ ಪುಡಿ

ಜೀರಿಗೆ ಪುಡಿ

ಉಪ್ಪು

ಬೆಣ್ಣೆ/ಎಣ್ಣೆ

ಮಾಡುವ ವಿಧಾನ

ಒಂದು ಪಾತ್ರೆಯಲ್ಲಿ ಬೇಯಿಸಿದ ಕಡಲೆಯನ್ನು ತೆಗೆದುಕೊಂಡು ಚೆನ್ನಾಗಿ ಮ್ಯಾಶ್ ಮಾಡಿ. ಇದಕ್ಕೆ ತುರಿದ ಪನೀರ್, ಹೆಚ್ಚಿದ ತರಕಾರಿಗಳು ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ. ನಂತರ ಚಾಟ್ ಮಸಾಲಾ, ಖಾರದ ಪುಡಿ, ಜೀರಿಗೆ ಪುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು.

ಬಳಿಕ ಒಂದು ಬ್ರೆಡ್ ತುಂಡನ್ನು ಇಟ್ಟು, ಅದರ ಮೇಲೆ ಸಿದ್ಧಪಡಿಸಿದ ಕಡಲೆ-ಪನೀರ್ ಮಿಶ್ರಣವನ್ನು ದಪ್ಪವಾಗಿ ಹರಡಿ. ಮತ್ತೊಂದು ಬ್ರೆಡ್ ತುಂಡಿನಿಂದ ಇದನ್ನು ಮುಚ್ಚಿ, ಲಘುವಾಗಿ ಒತ್ತಬೇಕು. ನಂತರ ತವಾ ಬಿಸಿ ಮಾಡಿ ಸ್ವಲ್ಪ ಬೆಣ್ಣೆ ಅಥವಾ ಎಣ್ಣೆ ಹಾಕಿ ಸ್ಯಾಂಡ್‌ವಿಚ್ ಇಟ್ಟು, ಎರಡೂ ಕಡೆ ಚಿನ್ನದ ಬಣ್ಣ ಬರುವವರೆಗೆ ಮಧ್ಯಮ ಉರಿಯಲ್ಲಿ ಚೆನ್ನಾಗಿ ಬೇಯಿಸಿದರೆ ಬಿಸಿಬಿಸಿಯಾದ, ಪ್ರೊಟೀನ್ ಯುಕ್ತ ಕಡಲೆ ಪನೀರ್ ಸ್ಯಾಂಡ್‌ವಿಚ್ ಸವಿಯಲು ಸಿದ್ಧ.  

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !