September 28, 2026
Monday, September 28, 2026
spot_img

Snacks | ಮಹಾರಾಷ್ಟ್ರ ಸ್ಟೈಲ್ ಸಾಬೂದಾನ ವಡಾ: ಫಾಸ್ಟ್ ರೆಸಿಪಿ ಗೈಡ್ ಇಲ್ಲಿದೆ

ಸಾಬೂದಾನ ವಡಾ ಮಹಾರಾಷ್ಟ್ರದ ಪ್ರಸಿದ್ಧ ಉಪಾಹಾರದ ತಿಂಡಿಯಾಗಿದೆ. ಹೊರಗಡೆ ಕ್ರಿಸ್ಪಿಯಾಗಿ, ಒಳಗಡೆ ಮೃದುವಾಗಿ ಇರುವ ಈ ವಡೆಗಳನ್ನು ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು

ಸಾಬೂದಾನ (ಸಬ್ಬಕ್ಕಿ): 1 ಕಪ್
ಆಲೂಗಡ್ಡೆ: 3 (ಬೇಯಿಸಿ ಮ್ಯಾಶ್ ಮಾಡಿದ್ದು)
ಕಡಲೆಕಾಯಿ: ½ ಕಪ್ (ಹುರಿದು ಪುಡಿ ಮಾಡಿದ್ದು)
ಹಸಿಮೆಣಸಿನಕಾಯಿ: 2-3 (ಸಣ್ಣದಾಗಿ ಹೆಚ್ಚಿದ್ದು)
ಕೊತ್ತಂಬರಿ ಸೊಪ್ಪು: ಸ್ವಲ್ಪ
ನಿಂಬೆ ರಸ: 1 ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಎಣ್ಣೆ: ಕರಿಯಲು

ತಯಾರಿಸುವ ವಿಧಾನ

ಸಾಬೂದಾನವನ್ನು ಚೆನ್ನಾಗಿ ತೊಳೆದು, ನೀರು ಮುಳುಗುವಷ್ಟು ಮಾತ್ರ ಹಾಕಿ 3-4 ಗಂಟೆಗಳ ಕಾಲ ನೆನೆಸಿಡಿ. ಸಾಬೂದಾನ ಮೃದುವಾಗಿರಬೇಕು, ನೀರು ಉಳಿಯಬಾರದು.

ನೆನೆಸಿದ ಸಾಬೂದಾನಕ್ಕೆ ಮ್ಯಾಶ್ ಮಾಡಿದ ಆಲೂಗಡ್ಡೆ, ಕಡಲೆಕಾಯಿ ಪುಡಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ನಿಂಬೆ ರಸ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ತಯಾರಿಸಿದ ಮಿಶ್ರಣದಿಂದ ಸಣ್ಣ ಉಂಡೆ ಮಾಡಿಕೊಂಡು ಕೈಯಿಂದ ಒತ್ತಿ ವಡೆಯ ಆಕಾರಕ್ಕೆ ತಟ್ಟಿಕೊಳ್ಳಿ.

ಬಾಣಲೆಯಲ್ಲಿ ಎಣ್ಣೆ ಚೆನ್ನಾಗಿ ಕಾಯಿಸಿ. ವಡೆಗಳನ್ನು ಹಾಕಿ ಮಧ್ಯಮ ಉರಿಯಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕರಿಯಿರಿ.

Must Read